ADVERTISEMENT

ಮುಂದುವರಿದ ತೆರಿಗೆ ತಾರತಮ್ಯ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 19:55 IST
Last Updated 4 ಅಕ್ಟೋಬರ್ 2025, 19:55 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ಕೇಂದ್ರ ಸರ್ಕಾರ ತೆರಿಗೆ ತಾರತಮ್ಯ ಮುಂದುವರಿಸಿದೆ. ಕೇಂದ್ರಕ್ಕೆ ಕನ್ನಡಿಗರ ದುಡಿಮೆ, ತೆರಿಗೆ ಬೇಕು. ವಾಪಸ್‌ ಕೊಡುವಾಗ ಕರ್ನಾಟಕ ಬೇಡವಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ದೇಶದಲ್ಲಿ ಕೆಲವೇ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ತೆರಿಗೆ ನೀಡುತ್ತಿವೆ. ತೆರಿಗೆ ಕೊಡದ ರಾಜ್ಯಗಳಿಗೆ ಪಾಲು ಕೊಡಬೇಡಿ ಎಂದು ಹೇಳಿಲ್ಲ. ಆದರೆ, ತಾರತಮ್ಯ ಮಾಡಬೇಡಿ ಎನ್ನುವುದು ನಮ್ಮ ಮನವಿ. ರಾಜ್ಯದ ಬಿಜೆಪಿ ಸಂಸದರು, ಪುಕ್ಕಟೆ ಭಾಷಣ ಮಾಡುವ ಕೇಂದ್ರ ಸಚಿವರು ಈ ಕುರಿತು ಪ್ರಧಾನಿ ಬಳಿ ಧ್ವನಿ ಎತ್ತಬೇಕು’ ಎಂದು ಸಲಹೆ ನೀಡಿದರು.

‘ಕರ್ನಾಟಕದ ಹೂಡಿಕೆದಾರರಿಗೆ ಆಂಧ್ರಪ್ರದೇಶಕ್ಕೆ ಆಹ್ವಾನ ನೀಡಿರುವ ಅಲ್ಲಿನ ಸಚಿವ ನಾ.ರಾ.ಲೋಕೇಶ್‌ ಮೊದಲು ಅಮರಾವತಿ ನಿರ್ಮಾಣ ಕಾರ್ಯದತ್ತ ಚಿತ್ತಹರಿಸಲಿ. ಪ್ರಧಾನಿ ನರೇಂದ್ರ ಮೋದಿ ಅವರು ₹10 ಸಾವಿರ ಕೋಟಿ ಕೊಟ್ಟರೂ ಕೆಲಸ ಏಕೆ ಆಗಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.