ADVERTISEMENT

ತೆರಿಗೆ ವಂಚನೆ: ಏಳು ಬಸ್‌ಗಳ ವಶ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 20:50 IST
Last Updated 23 ನವೆಂಬರ್ 2020, 20:50 IST
ವಶಕ್ಕೆ ‍ಪಡೆದಿರುವ ಬಸ್‌ಗಳ ಜತೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು
ವಶಕ್ಕೆ ‍ಪಡೆದಿರುವ ಬಸ್‌ಗಳ ಜತೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು   

ನೆಲಮಂಗಲ: ಒಂದೇ ನೊಂದಣಿ ಸಂಖ್ಯೆ ಅಳವಡಿಸಿಕೊಂಡು ತೆರಿಗೆ ವಂಚಿಸುತ್ತಿದ್ದ ಏಳು ಬಸ್‌ಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

‘ಅನಂದ್ ಟ್ರಾನ್ಸ್‌ ಲಿಂಕ್ ಮತ್ತು ಮಹದೇವ್ ಎಂಬ ಹೆಸರಿನ ಬಸ್‌ಗಳ ಮಾಲೀಕರಿಂದ ₹41 ಲಕ್ಷ ತೆರಿಗೆ ಬರಬೇಕಿದೆ. ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ’ ಎಂದು ಸಾರಿಗೆ ಆಯುಕ್ತ ಶಿವಕುಮಾರ್ ತಿಳಿಸಿದರು.

‘ನಕಲಿ ದಾಖಲೆ ಸೃಷ್ಠಿಸಿಕೊಂಡು ಹಲವು ರಾಜ್ಯಗಳಲ್ಲಿ ವಂಚನೆ ಮಾಡಿದ್ದಾರೆ. ವಂಚಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶಗಳಿವೆ. ಇದೇ ರೀತಿ ತೆರಿಗೆ ವಂಚಿಸಿ ಈ ಹಿಂದೆ ಸಿಕ್ಕಿಬಿದ್ದಿರುವ ವಾಹನಗಳನ್ನು ಬಿಡಿಸಿಕೊಳ್ಳಲು ಯಾರೂ ಬಾರದ ಕಾರಣ ಸದ್ಯದಲ್ಲೇ ಹರಾಜು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ನಕಲಿ ದಾಖಲೆಯೊಂದಿಗೆ ಕಾರ್ಯಾಚರಣೆ ಮಾಡುತ್ತಿರುವ ಬಸ್‌ಗಳನ್ನು ಹಿಡಿಯುವ ಕಾರ್ಯಾಚರಣೆ ಮುಂದುವರಿದಿದೆ. ಹೀಗಾಗಿ ಬಸ್‌ಗಳನ್ನು ಮುಂಬೈ ಹಾಗೂ ಇತರೆಡೆ ಮುಚ್ಚಿಡಲಾಗಿದೆ. ಹೊರಗೆ ಬಂದರೆ ಸಿಕ್ಕಿ ಬೀಳಲಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.