ADVERTISEMENT

‘ಪರಭಾಷಿಕರಿಗೆ ಕನ್ನಡ ಕಲಿಸಿ–ಭಾಷೆ ಕಟ್ಟಲು ಮುಂದಾಗಿ’

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 1:09 IST
Last Updated 17 ಆಗಸ್ಟ್ 2021, 1:09 IST
ಗೌರಿಸುಂದರ್ ವಾರ್ಷಿಕ ಪ್ರಶಸ್ತಿ ಸಮಿತಿಯಿಂದ (ಕುಳಿತವರು ಎಡದಿಂದ) ಹಿರಿಯ ನಟರಾದ ಬಿ.ಆರ್.ಜಯರಾಂ ಹಾಗೂ ಹಿರಿಯ ನಟ ಎಂ.ಕೆ.ಸುಂದರರಾಜ್ ಅವರಿಗೆ ‘ಗೌರಿಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಟಿ.ಎಸ್.ನಾಗಾಭರಣ, ಶಿಕ್ಷಣ ತಜ್ಞ ಕೆ.ಇ.ರಾಧಾಕೃಷ್ಣ, ಸಮಿತಿಯ ಪ್ರಧಾನ ಕಾರ್ಯದರ್ಶಿ ಇಂದಿರಾ ಸುಂದರ್, ಚಿತ್ರಶ್ರೀ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಇದ್ದಾರೆ- ಪ್ರಜಾವಾಣಿ ಚಿತ್ರ

ಬೆಂಗಳೂರು:‘ಜೀವಂತ ಕಲೆಯಾಗಿರುವ ರಂಗಭೂಮಿ ಹಿಂದಿನಿಂದಲೂ ಕನ್ನಡ ಭಾಷೆ ಕಟ್ಟುವ ಕೆಲಸ ಮಾಡಿಕೊಂಡು ಬಂದಿದೆ. ಇಲ್ಲಿನ ಪರಭಾಷಿಕರಿಗೆ ಕನ್ನಡ ಕಲಿಸುವ ಕೆಲಸವನ್ನು ನಾವೆಲ್ಲ ಮಾಡಬೇಕಾಗಿದೆ’ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.

ಗೌರಿಸುಂದರ್ ವಾರ್ಷಿಕ ಪ್ರಶಸ್ತಿ ಸಮಿತಿಯು ಸಿ.ಅಶ್ವತ್ಥ್ ಕಲಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಗೌರಿಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೆಚ್ಚು ಕನ್ನಡ ಶಬ್ದಗಳನ್ನು ರಂಗಭೂಮಿಯಲ್ಲಿ ಬಳಸಲಾಗುತ್ತದೆ. ಜೀವಂತ ಶಕ್ತಿ ಇರುವ ರಂಗಭೂಮಿಯಲ್ಲಿ ಸ್ಪಷ್ಟ ಕನ್ನಡ ಪದಗಳನ್ನು ಕಾಣಬಹುದು. ಅಲ್ಲಿಂದಲೇ ಹೆಚ್ಚು ಪದಗಳನ್ನು ಕಲಿಯಬಹುದಾಗಿದೆ. ಪರಭಾಷಿಕರಿಗೆ ಕನ್ನಡ ಕಲಿಸುವುದರಿಂದ ಭಾಷೆ ಕಟ್ಟುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು. ಈ ವಿಚಾರದಲ್ಲಿ ಜನರ ಪರ ಪ್ರಾಧಿಕಾರ ಸದಾ ಇರುತ್ತದೆ’ ಎಂದರು.

ADVERTISEMENT

‘ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪರಭಾಷಿಕರ ವಿರುದ್ಧವಾದ ಕೆಲಸ ಮಾಡುತ್ತಿಲ್ಲ. ಪರಭಾಷಿಕರೂ ಕನ್ನಡ ಕಲಿಯಬೇಕು ಹಾಗೂ ಮಾತನಾಡಬೇಕು ಎಂಬ ಉದ್ದೇಶ ನಮ್ಮದು. ಎಲ್ಲ ಕಚೇರಿಗಳಲ್ಲಿ ಕನ್ನಡ ಬಳಕೆ ಹಾಗೂ ಅರ್ಜಿಗಳ ಸ್ವೀಕಾರವೂ ಕನ್ನಡದಲ್ಲಿ ನಡೆಯುವಂತೆ ಮಾಡುವ ಪ್ರಯತ್ನದಲ್ಲಿದ್ದೇವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ನಟರಾದ ಬಿ.ಆರ್.ಜಯರಾಂ ಹಾಗೂ ಎಂ.ಕೆ.ಸುಂದರರಾಜ್ ಅವರಿಗೆ ‘ಗೌರಿಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.