ADVERTISEMENT

ಅಭಿವೃದ್ಧಿ ಹೆಸರಿನಲ್ಲಿ ಲಂಚ ಪಡೆಯುವವರಿಗೆ ಪಾಠ ಕಲಿಸಿ: ರವಿಕೃಷ್ಣಾರೆಡ್ಡಿ

ಕೆಆರ್‌ಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಮನವಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 1:45 IST
Last Updated 24 ಅಕ್ಟೋಬರ್ 2020, 1:45 IST
ರವಿ ಕೃಷ್ಣಾರೆಡ್ಡಿ
ರವಿ ಕೃಷ್ಣಾರೆಡ್ಡಿ   

ಬೆಂಗಳೂರು: ‘ಅಭಿವೃದ್ಧಿಯ ಹೆಸರಿನಲ್ಲಿ ಲಂಚ ಪಡೆಯುವ ಭ್ರಷ್ಟರಿಗೆ ತಕ್ಕ ಪಾಠ ಕಲಿಸಿ, ಪ್ರಾಮಾಣಿಕ ಅಭ್ಯರ್ಥಿಯನ್ನು ಆಯ್ಕೆ ಮಾಡಿ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್ ಪಕ್ಷ) ರಾಜ್ಯ ಘಟಕದ ಅಧ್ಯಕ್ಷರವಿಕೃಷ್ಣಾರೆಡ್ಡಿ ಮನವಿ ಮಾಡಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಯುಕ್ತ ಅವರು ಪಕ್ಷದ ಅಭ್ಯರ್ಥಿ ಅರವಿಂದ ಕೆ.ಬಿ ಪರ ಶುಕ್ರವಾರ ಪ್ರಚಾರ ನಡೆಸಿದರು.

‘ರಸ್ತೆಗಳ ನಿರ್ಮಾಣ, ಆಸ್ಪತ್ರೆಗಳು ಮತ್ತು ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವಿಕೆ ಸೇರಿದಂತೆ ವಿವಿಧ ಯೋಜನೆಗಳ ಹೆಸರಿನಲ್ಲಿ ಲಂಚ ಪಡೆದು ಕೊಳ್ಳುವವರು ನಮ್ಮ ನಾಯಕರಾಗುವುದಿಲ್ಲ. ಭ್ರಷ್ಟರನ್ನು ಮಟ್ಟಹಾಕಲು ಸಹಕಾರಿ ಯಾಗಿದ್ದ ಲೋಕಾಯುಕ್ತವನ್ನು ಹಾಳು ಮಾಡಿ, ಎಸಿಬಿ ತರುವ ಮೂಲಕಸಿದ್ದರಾಮಯ್ಯ ಅವರು ಮಹಾ ಅಪರಾಧ ಮಾಡಿದರು. ಜನರು ಇನ್ನಾದರೂ ಎಚ್ಚೆತ್ತುಕೊಂಡು ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು. ವಿದೇಶಕ್ಕೆ ಹೋಗಿ ಬಂದವರು, ವಿವಿಧ ಪದವಿ ಪಡೆದ ನಾಯಕರು ಜನರ ಕಷ್ಟ ಆಲಿಸಲು ಬರುತ್ತಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.