
ಪೀಣ್ಯ ದಾಸರಹಳ್ಳಿ: 'ಮಕ್ಕಳಿಗೆ ಶಿಸ್ತು, ಜ್ಞಾನ, ಸಂಸ್ಕಾರ, ಸಂಸ್ಕೃತಿ ಮತ್ತು ವಿದ್ಯೆ ಕಲಿಸಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಶಿಕ್ಷಕರ ಕಾರ್ಯ ಶ್ಲಾಘನೀಯ' ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಮಲ್ಲಸಂದ್ರದ ಕುವೆಂಪು ಪದವಿಪೂರ್ವ ಕಾಲೇಜಿನಲ್ಲಿ ಲಕ್ಷ್ಯ ಕಾಲೇಜಿನ ಸಹಯೋಗದೊಂದಿಗೆ ನಡೆದ ಗುರುವಂದನೆ ಸಮಾರಂಭದಲ್ಲಿ ಶಿಕ್ಷಕರನ್ನು ಅಭಿನಂದಿಸಿ ಅವರು ಮಾತನಾಡಿದರು.
‘ಶಾಲೆಗಳಲ್ಲಿ ಬಡ ಮಕ್ಕಳು ತಮ್ಮ ಪ್ರತಿಭೆ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಹೆಚ್ಚು ಅಂಕ ಪಡೆದು ರಾಜ್ಯಕ್ಕೆ ಮಾದರಿಯಾಗುತ್ತಿದ್ದಾರೆ. ಅಂತಹವರನ್ನು ತಿದ್ದಿ ವಿದ್ಯೆ ಕಲಿಸಿದ ಗುರುಗಳನ್ನು ಮರೆಯಬಾರದು. ಮಕ್ಕಳಲ್ಲಿನ ಅಂಧಕಾರ ಹೋಗಲಾಡಿಸಿ ಬದುಕಿಗೆ ಬೆಳಕು ನೀಡುವ ಗುರುಗಳು ದೇವರಿಗೆ ಸಮಾನ' ಎಂದು ತಿಳಿಸಿದರು.
ಲಕ್ಷ್ಯ ಕಾಲೇಜಿನ ಅಧ್ಯಕ್ಷ ಧರ್ಮರಾಜ್, ಶ್ರೀಧರ್, ಕುವೆಂಪು ಕಾಲೇಜಿನ ಟಿ.ಎಸ್. ಗಂಗರಾಜು, ಭರತ್ ಗುಂಡಪ್ಪ, ಗಂಡಸಿ ಸದಾಶಿವ, ಪ್ರಾಂಶುಪಾಲ ಕೃಷ್ಣಮೂರ್ತಿ, ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.