ADVERTISEMENT

ಚರ್ಚೆಗೆ ಗ್ರಾಸವಾದ ತೇಜಸ್ವಿನಿ ಅನಂತಕುಮಾರ್‌ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 20:29 IST
Last Updated 2 ಜೂನ್ 2021, 20:29 IST
ತೇಜಸ್ವಿನಿ ಅನಂತಕುಮಾರ್‌
ತೇಜಸ್ವಿನಿ ಅನಂತಕುಮಾರ್‌    

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಅವರು ‘ನಾಯಕತ್ವ’ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಮಾಡಿರುವ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಪ್ರಧಾನಿ ನರೇಂದ್ರ ಮೋದಿಯವರನ್ನೇ ಉದ್ದೇಶಿಸಿ ಈ ಟ್ವೀಟ್ ಮಾಡಿದ್ದೀರಲ್ಲವೇ’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

‘ಯಾರ ಮಾತುಗಳನ್ನೂ ಕೇಳದ ನಾಯಕನ ಸುತ್ತ ಅಂತಿಮವಾಗಿ ಏನನ್ನೂ ಹೇಳಲು ಬಯಸದವರೇ ಸುತ್ತುವರೆದಿರುತ್ತಾರೆ’ ಎಂಬ ಆ್ಯಂಡಿ ಸ್ಟಾನ್ಲಿ ಅವರ ಈ ಮಾತನ್ನಷ್ಟೇ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ತೇಜಸ್ವಿನಿ,
‘ಈ ಬಲಿಷ್ಠ ಸಂದೇಶವು ಸಮಾಜದ ಎಲ್ಲ ವರ್ಗಕ್ಕೂ ಅನ್ವಯವಾಗುತ್ತದೆ’ ಎಂದೂ ತೇಜಸ್ವಿನಿ ಅನಂತಕುಮಾರ್‌ ಪ್ರತಿಪಾದಿಸಿದ್ದಾರೆ.

ADVERTISEMENT

ಈ ಬಗ್ಗೆ ಸಾಕಷ್ಟು ವ್ಯಾಖ್ಯಾನಗಳು ಟ್ವಿಟರ್‌ನಲ್ಲಿ ವ್ಯಕ್ತವಾಗಿವೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರು ಚುನಾವಣೆ ಸ್ಪರ್ಧಿಸುವಂತೆ ಒತ್ತಾಯಿಸಿ ಪ್ರಚಾರಕ್ಕೆ ಇಳಿಸಿದರು. ಆದರೆ, ಟಿಕೆಟ್‌ ನೀಡಿದ್ದು ತೇಜಸ್ವಿ ಸೂರ್ಯ ಅವರಿಗೆ. ಬಳಿಕ ತೇಜಸ್ವಿನಿ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ಮಾಡಿದರೂ, ಅವರ ಪ್ರತಿಭೆಯನ್ನು ಬಳಸಿಕೊಳ್ಳಲಿಲ್ಲ. ಬಿ.ಎಲ್‌.ಸಂತೋಷ್‌ ಅವರ ಕಾರಣಕ್ಕೆ ಟಿಕೆಟ್‌ನಿಂದ ವಂಚಿತರಾಗಿದ್ದೂ ಅಲ್ಲದೆ, ರಾಜಕೀಯವಾಗಿ ಮೂಲೆಗುಂಪು ಮಾಡಲಾಗಿದೆ ಎಂದು ಬಿಜೆಪಿಯ ಒಂದು ವಲಯ ಭಾವಿಸಿದೆ. ಇವೆಲ್ಲವೂ ಮತ್ತೆ ಮುನ್ನೆಲೆಗೆ ಬರಲು ಟ್ವೀಟ್ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.