ADVERTISEMENT

99.9 ಡಿಗ್ರಿ ಉಷ್ಣಾಂಶ: ಏಪ್ರಿಲ್‌ ಫೂಲ್‌ ಮಾಡುತ್ತಿದೆಯೇ ಹವಾಮಾನ ಇಲಾಖೆ!

ಏಪ್ರಿಲ್‌ ಫೂಲ್‌ ಮಾಡುತ್ತಿದೆಯೇ ಹವಾಮಾನ ಇಲಾಖೆ?

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 1:48 IST
Last Updated 29 ಮಾರ್ಚ್ 2019, 1:48 IST
   

‌ಬೆಂಗಳೂರು: ಏಪ್ರಿಲ್‌ 1ರಂದು ಬೆಂಗಳೂರಿನಲ್ಲಿ 99.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ...

ಹೀಗೆಂದು ಹವಾಮಾನ ಇಲಾಖೆಯ ಅಧಿಕೃತ ವೆಬ್‌ಸೈಟ್ ಹೇಳುತ್ತಿದೆ. ಹಿಂದಿನ ದಿನ 35 ಡಿಗ್ರಿ ಉಷ್ಣಾಂಶ ಇರಲಿದ್ದು, ಮರುದಿನ ಇಷ್ಟೊಂದು ಉ‌ಷ್ಣಾಂಶ ಹೆಚ್ಚಾಗಲಿದೆ.

ಮುಂದಿನ ದಿನ 34 ಡಿಗ್ರಿಗೆ ಇಳಿಯಲಿದೆ ಎಂದು ದಾಖಲಿಸಿರುವುದು ಅಚ್ಚರಿ ಮೂಡಿಸಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಇಷ್ಟೊಂದು ಪ್ರಮಾಣದ ಉಷ್ಣಾಂಶವೇನಾದರೂ ಹೆಚ್ಚಿದರೆ ಜನರೆಲ್ಲ ಗುಳೆ ಹೋಗುವುದು ಅನಿವಾರ್ಯವಾಗಲಿದೆ! ತಾಪಮಾನದ ಈ ಪ್ರಮಾಣ ಸಾರ್ವಕಾಲಿಕ ದಾಖಲೆಯೂ ಆಗಲಿದೆ!

ADVERTISEMENT

ಏಪ್ರಿಲ್ 1ರಂದು ಮೂರ್ಖರ ದಿನಾವಾಗಿರುವ ಕಾರಣ ತಮಾಷೆಗಾಗಿ ಈ ರೀತಿ ದಾಖಲಿಸಲಾಗಿದೆಯೋ, ಅಥವಾ ಕಣ್ತಪ್ಪಿನಿಂದ ಹೀಗೆ ಆಗಿದೆಯೋ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಹವಾಮಾನ ಇಲಾಖೆ ಅಧಿಕಾರಿಗಳನ್ನು ಕೇಳಿದಾಗ ‘ಕಣ್ತಪ್ಪಿನಿಂದ ಹೀಗೆ ಆಗಿರಬಹುದು, ಶುಕ್ರವಾರ ಪರಿಶೀಲಿಸುತ್ತೇವೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.