ಯಲಹಂಕ: ಹೆಗಡೆನಗರದಲ್ಲಿ ಆಯೋಜಿಸಿದ್ದ ‘ಹೆಗಡೆನಗರ ಪ್ರೀಮಿಯರ್ ಲೀಗ್’ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ‘ಎಸ್‌ಬಿ ಗ್ರೂಪ್’ ಚಾಂಪಿಯನ್ ಆಗಿ ಹೊರಹೊಮ್ಮಿದೆ.
‘ಯುನಿಕ್ ಬ್ರದರ್ಸ್’ ತಂಡ ದ್ವಿತೀಯ ಸ್ಥಾನ ಪಡೆಯಿತು. ‘ಎಸ್.ಬಿ. ಗ್ರೂಪ್’ ಆಟಗಾರ ಫಯಾಜ್ ‘ಪಂದ್ಯ ಶ್ರೇಷ್ಠ’ ಹಾಗೂ ‘ಯುನಿಕ್ ಬ್ರದರ್ಸ್’ ಆಟಗಾರ ನವೀದ್ ‘ಸರಣಿ ಶ್ರೇಷ್ಠ’ ಪ್ರಶಸ್ತಿ ಪಡೆದರು.
ಜೆಡಿಎಸ್ ಬ್ಯಾಟರಾಯನಪುರ ಕ್ಷೇತ್ರದ ಘಟಕದ ಅಧ್ಯಕ್ಷ ಎನ್.ವೇಣುಗೋಪಾಲ್ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಮುಖಂಡರಾದ ಜಮ್ಶಿದ್, ಹರೀಶ್ ಎನ್., ಎಸ್.ಟಿ. ದಾಸಪ್ಪ, ಗೋಪಾಲ್ ಎಸ್., ಕೈಸರ್, ರಿಯಾಜ್, ಪಂದ್ಯಾವಳಿಯ ಸಂಘಟಕರಾದ ಇಲ್ಲು, ಜಿಯಾ, ಮುಜಾಹಿದ್, ಫಾರೂಕ್ ಪಾಷ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.