ADVERTISEMENT

ಚಾರುಕೀರ್ತಿ ಭಟ್ಟಾರಕರ ದೀಕ್ಷಾ ಸುವರ್ಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 20:30 IST
Last Updated 12 ಡಿಸೆಂಬರ್ 2019, 20:30 IST
ಮೈಸೂರಿನ ಕೋಟೆ ಶಾಂತಿನಾಥ ಜೈನ ಬಸದಿಯಲ್ಲಿ ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕರ ದೀಕ್ಷಾ ಸುವರ್ಣ ಮಹೋತ್ಸವವನ್ನು ಗುರುವಾರ ಆಚರಿಸಲಾಯಿತು. ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಇದ್ದಾರೆ
ಮೈಸೂರಿನ ಕೋಟೆ ಶಾಂತಿನಾಥ ಜೈನ ಬಸದಿಯಲ್ಲಿ ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕರ ದೀಕ್ಷಾ ಸುವರ್ಣ ಮಹೋತ್ಸವವನ್ನು ಗುರುವಾರ ಆಚರಿಸಲಾಯಿತು. ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಇದ್ದಾರೆ   

ಮೈಸೂರು: ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕರ ದೀಕ್ಷಾ ಸುವರ್ಣ ಮಹೋತ್ಸವ ಮೈಸೂರಿನಲ್ಲಿ ನೆರವೇರಿತು. ಚಾರುಕೀರ್ತಿ ಭಟ್ಟಾರಕರು ಸನ್ಯಾಸ ದೀಕ್ಷೆ ಪಡೆದು ಗುರುವಾರಕ್ಕೆ (12–12–1969) ಐವತ್ತು ವರ್ಷ ತುಂಬಿದ್ದರಿಂದ, ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಾಕೃತ ಸಮಾವೇಶದಲ್ಲೂ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು.ಕೋಟೆ ಶಾಂತಿನಾಥ ಜೈನ ಬಸದಿಯಲ್ಲಿಯೂ ದೀಕ್ಷಾ ಸುವರ್ಣ ಮಹೋತ್ಸವ ಆಚರಿಸಲಾಯಿತು.

ಹಂಪಿಯಲ್ಲಿ ಪ್ರಾಕೃತ ಅಧ್ಯಯನ ಕೇಂದ್ರ

‘ಜೈನ ಧರ್ಮದ ಪ್ರಭಾವ ಕರ್ನಾಟಕದಲ್ಲಿ ಹೆಚ್ಚಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ 100ಕ್ಕೂ ಹೆಚ್ಚು ಜೈನ ಕೃತಿಗಳನ್ನು ಬಿಡುಗಡೆಗೊಳಿಸಿದೆ. ಇವು ಮರು ಮುದ್ರಣ ಕಂಡಿವೆ. ಪ್ರಾಕೃತ ಅಧ್ಯಯನ ಕೇಂದ್ರ ತೆರೆಯಲು ಸಿದ್ಧತೆ ನಡೆಸಿಕೊಳ್ಳಲಾಗಿದೆ’ ಎಂದು ವಿ.ವಿ ಕುಲಪತಿ ಸ.ಚಿ.ರಮೇಶ್‌ ತಿಳಿಸಿದರು.

ADVERTISEMENT

‘ಜೈನ ಸಾಹಿತ್ಯದ ಕೆಲ ಕೃತಿಗಳು ಮುದ್ರಣಗೊಂಡಿವೆ. ಸ್ವಾಮೀಜಿ ಜತೆ ಈ ನಿಟ್ಟಿನಲ್ಲಿ ಚರ್ಚಿಸಿದ್ದು, ಶ್ರವಣಬೆಳಗೊಳದಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.