ADVERTISEMENT

ಸರ್ಕಾರ ಹೇಳಿದ್ದು 1000 ವೆಂಟಿಲೇಟರ್, ಆದೇಶ ಕೊಟ್ಟಿದ್ದು ಕೇವಲ 100ಕ್ಕೆ ಮಾತ್ರ!

ರಾಜೇಶ್ ರೈ ಚಟ್ಲ
Published 27 ಮಾರ್ಚ್ 2020, 7:47 IST
Last Updated 27 ಮಾರ್ಚ್ 2020, 7:47 IST
ಕೊರೊನಾ ರೋಗಿಗಳಿಗೆ ಅತ್ಯಂತ ಅವಶ್ಯಕತೆ ಇರುವ ವೆಂಟಿಲೇಟರ್
ಕೊರೊನಾ ರೋಗಿಗಳಿಗೆ ಅತ್ಯಂತ ಅವಶ್ಯಕತೆ ಇರುವ ವೆಂಟಿಲೇಟರ್    

ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಲ್ಲಿ ಜನ ನಲುಗುತ್ತಿದ್ದರೆ, ಅತ್ತ ತಕ್ಷಣಕ್ಕೆ 1,000 ವೆಂಟಿಲೇಟರ್‌ ಒದಗಿಸುವಂತೆ ಮೈಸೂರಿನ ಸ್ಕ್ಯಾನ್‌ರೇ ಟೆಕ್ನಾಲಜಿ ಕಂಪನಿಗೆಆದೇಶನೀಡಲಾಗಿದೆ ಎಂದು ಮಾರ್ಚ್ 23ರಂದು ಹೇಳಿದ್ದ ರಾಜ್ಯ ಸರ್ಕಾರ, ಈವರೆಗೆ ಕೇವಲ100ವೆಂಟಿಲೇಟರ್‌ಗೆಮಾತ್ರಆದೇಶನೀಡಿದೆ. ಅದೂ ’ದೃಢೀಕೃತ ಆದೇಶವಲ್ಲ‘ ಎಂದು ಕಂಪನಿ ಹೇಳಿದೆ.

’ನಮ್ಮ ಜೊತೆ ವಿಡಿಯೊ ಸಂವಾದ ನಡೆಸಿದ ವೇಳೆ 1,000 ವೆಂಟಿಲೇಟರ್ ತಕ್ಷಣ ಪೂರೈಸುವಂತೆ ಉಪ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮಲು ಸೂಚಿಸಿದ್ದಾರೆ. ರಾಜ್ಯ ಹಿತದೃಷ್ಟಿಯಿಂದ ಇದಕ್ಕೆ ನಾವೂ ಒಪ್ಪಿದ್ದೆವು. ಆದರೆ, ಕೇವಲ100ವೆಂಟಿಲೇಟರ್‌ ಪೂರೈಸುವಂತೆಮಾತ್ರನಮಗೆಆದೇಶತಲುಪಿದೆ‘ ಎಂದು ಕಂಪನಿಯ ಸಂಸ್ಥಾಪಕರೂ ಆಗಿರುವ ಆಡಳಿತ ನಿರ್ದೇಶಕ ವಿಶ್ವಪ್ರಸಾದ್‌ ಆಳ್ವ ತಿಳಿಸಿದರು.

’ಪ್ರಜಾವಾಣಿ‘ಗೆ ಮಾಹಿತಿ ನೀಡಿದ ಅವರು, ‘ಹಾಗೆಂದು, ಸರ್ಕಾರ ನಮಗೆ ಯಾವುದೇ ಮುಂಗಡ ಹಣ ನೀಡಿಲ್ಲ. ಕೇವಲ ಪತ್ರ ಮೂಲಕಮಾತ್ರತಿಳಿಸಿದೆ. ಮುಂಗಡ ಹಣದ ಜೊತೆಆದೇಶತಲುಪದಿರುವುದರಿಂದ ದೃಢೀಕೃತ ಆದೇಶವೆಂದು ಪರಿಗಣಿಸಲು ಸಾಧ್ಯವಿಲ್ಲ. ನಾವು ರಾಜ್ಯ ಸರ್ಕಾರಕ್ಕೆಂದು ವೆಂಟಿಲೇಟರ್ ತಯಾರಿಸುತ್ತಿಲ್ಲ‘ ಎಂದೂ ಅವರು ಸ್ಪಷ್ಟಪಡಿಸಿದರು.

ADVERTISEMENT

ಒಂದು ಸಾವಿರ ವೆಂಟಿಲೇಟರ್‌ ಪೂರೈಸುವಂತೆ ಸ್ಕ್ಯಾನ್‌ರೇ ಕಂಪನಿಗೆಆದೇಶನೀಡಲಾಗಿದೆ ಎಂದು ‌ಅಶ್ವತ್ಥ್ ನಾರಾಯಣ ಮತ್ತು ಬಿ. ಶ್ರೀರಾಮುಲು ವಿಧಾನಮಂಡಲದ ಉಭಯ ಸದನಗಳಲ್ಲಿ ಘೋಷಿಸಿದ್ದರು.ತಮಿಳುನಾಡು, ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳಿಂದಷ್ಟೇ ಅಲ್ಲದೆ, ಹೊರದೇಶಗಳಿಂದಮಾತ್ರ30 ಸಾವಿರವೆಂಟಿಲೇಟರ್‌ಗೆಬೇಡಿಕೆ ಬಂದಿದೆ. ಆದರೆ, ಸದ್ಯಕ್ಕೆ ಯಾವುದೇ ವಸ್ತುಗಳನ್ನು ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂದರು.

‘ಮೈಸೂರು ಮತ್ತು ಇಟಲಿಯ ಬೊಲೊಗ್ನಾದಲ್ಲಿರುವ ಕಂಪನಿಯ ಘಟಕಗಳು ದೇಶ ಮತ್ತು ವಿದೇಶಗಳಿಂದ ಬಂದಿರುವ ವೆಂಟಿಲೇಟರ್‌ಗಳ ತರ್ತು ಬೇಡಿಕೆ ಪೂರೈಸಲು ದಿನ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಸಾಮರ್ಥ್ಯಕ್ಕಿಂತ 25 ಪಟ್ಟು ಹೆಚ್ಚು ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ, ಡಿಆರ್‌ಡಿಓ, ನೀತಿ ಆಯೋಗ ಮತ್ತು ರಾಜ್ಯ ಸರ್ಕಾರದ ಏಜೆ್ನ್ಸಿಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ. ವೆಂಟಿಲೇಟರ್‌ ಉತ್ಪಾದನಾ ವಿನ್ಯಾಸವನ್ನು ವರ್ಗಾಯಿಸಲು ಕೇಂದ್ರ ಸರ್ಕಾರದ ಡಿಫೆನ್ಸ್‌ ಲ್ಯಾಬ್‌, ಬಿಇಎಲ್‌ ಜೊತೆ ಮಾತುಕತೆ ಪ್ರಗತಿಯಲ್ಲಿದೆ. ಆಟೊಮೊಬೈಲ್‌ ಕ್ಷೇತ್ರದ ಮಹೀಂದ್ರ ಆ್ಯಂಡ್‌ ಮಹೀಂದ್ರ ಮತ್ತು ಟಾಟಾ ಗ್ರೂಪ್‌ ಜೊತೆಗೂ ಚರ್ಚೆ ನಡೆದಿದೆ’ ಎಂದು ಆಳ್ವ ವಿವರಿಸಿದರು.

’ಸದ್ಯ ಇಡೀ ದೇಶದಲ್ಲಿ ಒಂದು ಲಕ್ಷ ವೆಂಟಿಲೇಟರ್‌ ಲಭ್ಯವುದ್ದು, ಇನ್ನೂ ಒಂದು ಲಕ್ಷವೆಂಟಿಲೇಟರ್‌ಗೆಕೇಂದ್ರದಿಂದ ಬೇಡಿಕೆ ಬಂದಿದೆ. ಸಹಭಾಗಿ ಕಂಪನಿಗಳ ನೆರವಿನಿಂದ ಈ ಗುರಿ ಈಡೇರಿಸುವ ವಿಶ್ವಾಸವಿದೆ‘ ಎಂದರು.

’ಕೋವಿಡ್‌ 19 ನಿಯಂತ್ರಣ ಕಾರ್ಯಪಡೆಯಲ್ಲಿರುವ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ವಿವಿಧ ಹೊಣೆಗಾರಿಕೆ ವಹಿಸಿರುವ ಹಿರಿಯ ಐಎಎಸ್‌ ಅಧಿಕಾರಿಗಳಾದ ಗುಂಜನ್‌ ಕೃಷ್ಣ, ಮಣಿವಣ್ಣನ್‌ ನಿರಂತರ ಸಂಪರ್ಕದಲ್ಲಿದ್ದಾರೆ. ಮೈಸೂರಿನ ಘಟಕದಲ್ಲಿ ಮೊದಲ ಹಂತದ ವೆಂಟಿಲೇಟರ್‌ಗಳು 10 ದಿನಗಳ ಒಳಗೆ ಸಿದ್ಧವಾಗಲಿದೆ. ಕೆಲವೇ ವಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್‌ ಉತ್ಪಾದನೆ ಆರಂಭವಾಗಲಿದೆ‘ ಎಂದರು.

ತಿಂಗಳಿಗೆ 5 ಸಾವಿರ ವೆಂಟಿಲೇಟರ್‌ ಉತ್ಪಾದನಾ ಸಾಮರ್ಥ್ಯವಿದೆ. ದೃಢೀಕೃತ ಆದೇಶ ವಿಳಂಬವಾಗಿ ಬಂದರೆ ಬೇಡಿಕೆಯನ್ನು ತಕ್ಷಣಕ್ಕೆ ಪೂರೈಸುವುದು ಕಷ್ಟ- ವಿಶ್ವಪ್ರಸಾದ್‌ ಆಳ್ವ, ಆಡಳಿತ ನಿರ್ದೇಶಕ, ಸ್ಕ್ಯಾನ್‌ರೇ ಕಂಪನಿ.

ಒಂದು ಸಾವಿರ ವೆಂಟಿಲೇಟರ್‌ ಬೇಕೆಂದು ಸ್ಕ್ಯಾನ್‌ರೇ ಕಂಪನಿ ಜೊತೆ ಮಾತುಕತೆ ನಡೆಸಿದ್ದೆವು. ಅಲ್ಲದೆ, ಅಷ್ಟನ್ನೂ ಪೂರೈಸುವಂತೆ ಈಗಾಗಲೇ ಆದೇಶ ಕೂಡಾ ಕೊಟ್ಟಿದ್ದೇವೆ-ಬಿ. ಶ್ರೀರಾಮುಲು, ಆರೋಗ್ಯ ಸಚಿವ

ವೆಂಟಿಲೇಟರ್‌ಗೆ ₹ 5ಲಕ್ಷದಿಂದ ₹ 12 ಲಕ್ಷ

‘ವೆಂಟಿಲೇಟರ್‌ಗೆ ₹ 5ಲಕ್ಷದಿಂದ 12 ಲಕ್ಷದವರೆಗೆ ಬೆಲೆ ಇದೆ. ಉತ್ಪಾದನೆಯ ಪ್ರಮಾಣ ಹೆಚ್ಚಿದಂತೆ ಬೆಲೆ ಕಡಿಮೆ ಆಗಲಿದೆ. 50 ಸಾವಿರ ಒಮ್ಮೆಗೆ ಉತ್ಪಾದಿಸಿದರೆ ಬೆಲೆ ತಲಾ ₹ 2.5 ಲಕ್ಷಕ್ಕೆ ಇಳಿಯಬಹುದು. ಸದ್ಯ ನಮ್ಮಲ್ಲಿ ಸಂಪೂರ್ಣ ಸ್ವಯಂಚಾಲಿತ ವೆಂಟಿಲೇಟರ್‌ ಉತ್ಪಾದಿಸುತ್ತಿದ್ದೇವೆ. ಸೆಮಿ ವೆಂಟಿಲೇಟರ್‌ ಬೆಲೆ ಇನ್ನೂ ಕಡಿಮೆಯಾಗುತ್ತದೆ’ ಎಂದು ವಿಶ್ವಪ್ರಸಾದ್‌ ಆಳ್ವ ತಿಳಿಸಿದರು.

ಮುಖ್ಯಾಂಶಗಳು

ರಾಜ್ಯಕ್ಕಾಗಿ ವೆಂಟಿಲೇಟರ್‌ ತಯಾರಾಗುತ್ತಿಲ್ಲ. 24 ಗಂಟೆ ಕಾರ್ಯನಿರ್ವಹಿಸುತ್ತಿದೆ ’ಸ್ಕ್ಯಾನ್‌ರೇ‘.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.