ADVERTISEMENT

ದಿ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ: ಆನ್‌ಲೈನ್‌ನಲ್ಲಿ ಸಾಮಗ್ರಿ ಖರೀದಿ

ಬಂಧಿತನ ವಿಚಾರಣೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 16:03 IST
Last Updated 30 ಮಾರ್ಚ್ 2024, 16:03 IST
<div class="paragraphs"><p>ದಿ ರಾಮೇಶ್ವರ ಕೆಫೆ </p></div>

ದಿ ರಾಮೇಶ್ವರ ಕೆಫೆ

   

ಬೆಂಗಳೂರು: ‘ದಿ ರಾಮೇಶ್ವರ ಕೆಫೆ’ಯಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ಬಂಧಿತನಾಗಿರುವ ಶಂಕಿತ ಮುಜಾಮಿಲ್‌ ಶರೀಫ್‌ನನ್ನು ಏಳು ದಿನ ಕಸ್ಟಡಿಗೆ ಪಡೆದಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಿಚಾರಣೆ ಮುಂದುವರಿಸಿದೆ.

ತಲೆಮರೆಸಿಕೊಂಡಿರುವ ಶಂಕಿತರಾದ ಅಬ್ದುಲ್‌ ಮತೀನ್‌ ಅಹ್ಮದ್‌ ತಾಹಾ, ಮುಸಾವೀರ್‌ ಹುಸೇನ್‌ ಶಾಜೀದ್‌ ಅವರೊಂದಿಗೆ ಸೇರಿಕೊಂಡು ಮುಜಾಮಿಲ್‌ ಶರೀಫ್‌ ಸ್ಫೋಟಕ್ಕೆ ರೂಪಿಸಿದ್ದ ಸಂಚಿನ ಬಗ್ಗೆ ತನಿಖಾ ತಂಡಕ್ಕೆ ಮಹತ್ವದ ಮಾಹಿತಿ ಲಭಿಸಿದ್ದು ತನಿಖೆ ಚುರುಕುಗೊಳಿಸಿದೆ.

ADVERTISEMENT

‘ರಾಮೇಶ್ವರಂ ಕೆಫೆ’ ಬಾಂಬ್‌ ಸ್ಫೋಟಕ್ಕೆ ಬೆಂಗಳೂರಿನ ಹೊರವಲಯದಲ್ಲಿ ಶಂಕಿತರು ಐಇಡಿ ಸಿದ್ಧಪಡಿಸಿರುವ ಮಾಹಿತಿ ಸಿಕ್ಕಿದೆ. ಸ್ಫೋಟಕ್ಕೆ ಬಳಸಲು ಬೇಕಾದ ಕಚ್ಚಾ ಸಾಮಗ್ರಿಗಳನ್ನು ಖರೀದಿಸಲು ₹4,500ರಿಂದ ₹5 ಸಾವಿರವನ್ನು ಶಂಕಿತರು ವ್ಯಯಿಸಿದ್ದರು. ಬಾಂಬ್‌ ತಯಾರಿಸಲು ಸುಮಾರು ಎರಡರಿಂದ ಮೂರು ತಿಂಗಳು ತೆಗೆದುಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

‘ಬಾಂಬ್‌ ತಯಾರಿಸಲು ಬೇಕಾದ ಕಚ್ಚಾ ಸಾಮಗ್ರಿಗಳ ಪೈಕಿ ಕೆಲವನ್ನು ಆನ್‌ಲೈನ್‌ ಮೂಲಕವೇ ಶಂಕಿತರು ಖರೀದಿಸಿದ್ದರು. ಡೆಟೋನೇಟರ್, ಟೈಮರ್, ಬ್ಯಾಟರಿ, ರಂಜಕವನ್ನು ಆನ್‌ಲೈನ್ ಮೂಲಕ ಖರೀದಿಸಿದ್ದರೆ, ನಟ್, ಬೋಲ್ಟ್ ಹಾಗೂ ಕೆಲವು ವೈಯರ್​ಗಳನ್ನು ಅಂಗಡಿಯಲ್ಲಿ ಖರೀದಿಸಿದ್ದರು. ಖರೀದಿಸಿದ ಕಚ್ಚಾ ವಸ್ತುಗಳನ್ನು ಮುಜಾಮಿಲ್‌ ಶರೀಫ್, ಬಾಂಬ್‌ ತಯಾರಿಸುತ್ತಿದ್ದ ಅಬ್ದುಲ್​ ಮತೀನ್ ಅಹ್ಮದ್‌ ತಾಹ ಮತ್ತು ಮುಸಾವೀರ್ ಹುಸೇನ್‌ ಶಾಜೀದ್‌ಗೆ ನೀಡುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.