ಸಾಂದರ್ಭಿಕ ಚಿತ್ರ
ಬೆಂಗಳೂರು: ಒಂದು ವರ್ಷದ ಅವಧಿಯಲ್ಲಿ ಕಳವು ಮಾಡಲಾಗಿದ್ದ 426 ಬೈಕ್‌ಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಬೈಕ್ ಕಳವು ಪ್ರಕರಣಗಳಲ್ಲಿ 118 ಮಂದಿಯನ್ನು ಬಂಧಿಸಿದ್ದಾರೆ. ಜಪ್ತಿ ಮಾಡಿಕೊಂಡ ಬೈಕ್‌ಗಳ ಮೌಲ್ಯ ₹2.75 ಕೋಟಿಯಾಗಿದೆ ಎಂದು ಪೊಲೀಸರು ಹೇಳಿದರು.
‘ಜಪ್ತಿ ಮಾಡಿಕೊಂಡ ಬೈಕ್‌ಗಳಲ್ಲಿ 291 ಬೈಕ್‌ಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. 135 ಬೈಕ್‌ಗಳು ವಿವಿಧ ಪೊಲೀಸ್ ಠಾಣೆಗಳಲ್ಲಿದ್ದು, ಅವುಗಳನ್ನು ವಾರಸುದಾರರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.
ಉಪ್ಪಾರಪೇಟೆ ಪೊಲೀಸರು 5, ಸಿಟಿ ಮಾರುಕಟ್ಟೆ 13, ಕಲಾಸಿಪಾಳ್ಯ 18, ಕಾಟನ್‌ಪೇಟೆ 55, ಚಾಮರಾಜಪೇಟೆ 6, ಜೆಜೆ ನಗರ 37, ಬ್ಯಾಟರಾಯನಪುರ 47, ಚಂದ್ರಾಲೇಔಟ್ 14, ಆರ್.ಆರ್.ನಗರ 16, ಕೆಂಗೇರಿ 22, ಬ್ಯಾಡರಹಳ್ಳಿ 27, ಅಂಜನಾಪುರ 30, ಜ್ಞಾನಭಾರತಿ 25, ವಿಜಯನಗರ 29, ಮಾಗಡಿ ರಸ್ತೆ 7, ಕೆ.ಪಿ.ಅಗ್ರಹಾರ 13, ಬಸವೇಶ್ವರ ನಗರ 11, ಕಾಮಾಕ್ಷಿಪಾಳ್ಯ 36, ಗೋವಿಂದರಾನಗರ ಪೊಲೀಸರು 15 ಬೈಕ್‌ಗಳನ್ನು ಇದುವರೆಗೆ ಜಪ್ತಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.