ಬಂಧನ
ಬೆಂಗಳೂರು: ರೈಲಿನ ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಕರ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಾಖಂಡದ ನೈನಿತಾಲ್ ನಿವಾಸಿ ಜಿತೇಂದ್ರಕುಮಾರ್ ಚಾವ್ಲಾ (37) ಎಂಬಾತನನ್ನು ಬಂಧಿಸಿ, ₹ 4.55 ಲಕ್ಷ ಮೌಲ್ಯದ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಎಸ್‌ಪಿ ಸೌಮ್ಯಲತಾ ತಿಳಿಸಿದ್ದಾರೆ.
ಫೆಬ್ರುವರಿ 8ರಂದು ಪಂಡಿತ್ ಶಂಕರ್ ರಾವ್ ಕುಲಕರ್ಣಿ ದಂಪತಿ, ಉಡುಪಿಯಿಂದ ಬೆಂಗಳೂರಿಗೆ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುವಾಗ ಅವರ ಸೀಟಿನ ಮೇಲಿದ್ದ ಎರಡು ಬ್ಯಾಗ್‌ಗಳು ಕಳ್ಳತನವಾಗಿದ್ದವು. ಅದರಲ್ಲಿ ₹ 25 ಸಾವಿರ ನಗದು ₹ 40 ಸಾವಿರ ಮೌಲ್ಯದ ಚಿನ್ನಾಭರಣಗಳು, ಡೆಬಿಟ್ ಕಾರ್ಡ್‌ಗಳು ಕಳವು ಆಗಿದ್ದವು. ಈ ಸಂಬಂಧ ಅವರ ಪುತ್ರ ಪ್ರೀತಮ್ ಕುಲಕರ್ಣಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ, 81 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.