ADVERTISEMENT

ವಿದ್ಯುತ್ ಕಳ್ಳತನ; ₹2.59 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 3:27 IST
Last Updated 17 ಜನವರಿ 2023, 3:27 IST
   

ಬೆಂಗಳೂರು: ಬೆಸ್ಕಾಂ ಜಾಗೃತ ದಳವು ಕಳೆದ ನಾಲ್ಕು ತಿಂಗಳಲ್ಲಿ 10,908 ಸ್ಥಾವರಗಳ ತಪಾಸಣೆ ಮಾಡಿ, ವಿದ್ಯುತ್‌ ಕಳ್ಳತನ ಮಾಡಿದ್ದ ಗ್ರಾಹಕರಿಗೆ ₹ 2.59 ಕೋಟಿ ದಂಡ ವಿಧಿಸಿದೆ.

ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಒಟ್ಟು 1,781 ಪ್ರಕರಣಗಳನ್ನು ಜಾಗೃತ ದಳ ದಾಖಲಿಸಿಕೊಂಡಿದ್ದು, ಇದರಲ್ಲಿ 1,721 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಇದೇ ರೀತಿ ಬಾಕಿ ವಿದ್ಯುತ್ ಬಿಲ್ ವಸೂಲಿಗೆ ಬೆಸ್ಕಾಂ ಕ್ರಮ ಕೈಗೊಂಡಿದ್ದು, 3 ತಿಂಗಳಲ್ಲಿ ಬಾಕಿ ಇದ್ದ ₹ 1417.45 ಕೋಟಿ ಮೊತ್ತದಲ್ಲಿ ₹ 358.3 ಕೋಟಿ ಮೊತ್ತವನ್ನು ಸಂಗ್ರಹಿಸಿದೆ. ಬಿಲ್ ಪಾವತಿಸದ ಸುಮಾರು 23 ಲಕ್ಷ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.