ADVERTISEMENT

ಬಡತನದಲ್ಲೂ ಅರಳಿದ ಕುಸುಮ

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:28 IST
Last Updated 6 ಮೇ 2019, 19:28 IST
ಅನಿತಾ
ಅನಿತಾ   

ನೆಲಮಂಗಲ: ಮನೆಯಲ್ಲಿ ಬಡತನ, ಹೇಳಿಕೊಳ್ಳುವಂತಹ ಅನುಕೂಲಗಳಿಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 611 ಅಂಕ ಗಳಿಸುವ ಮೂಲಕ ಅನಿತಾ ಮತ್ತು ಸಿ.ಚಂದನಾ ಸಾಧನೆ ಮಾಡಿದ್ದಾರೆ.

ಇಬ್ಬರು ವಿಶಾಲ್‌ ಆಂಗ್ಲ ಶಾಲೆ ವಿದ್ಯಾರ್ಥಿನಿಯರು.

ಅನಿತಾಳ ಪೋಷಕರಾದ ದೀಪಕ್‌ ಬಹದ್ದೂರ್‌ ಮತ್ತು ದುರ್ಗಾ ನೇಪಾಳದವರು. ಇವರು 20 ವರ್ಷಗಳಿಂದ ನೆಲಮಂಗಲದಲ್ಲಿ ನೆಲೆಸಿದ್ದಾರೆ.ದೀಪಕ್‌ ಅವರು ಕಾರ್ಖಾನೆಯಲ್ಲಿ ಸಹಾಯಕರಾಗಿದ್ದಾರೆ.

ADVERTISEMENT

‘ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪಾಠವನ್ನೇ ಗಮನ ವಹಿಸಿ ಕೇಳುತ್ತಿದ್ದೆ. ಮನೆಯಲ್ಲಿ ನಿತ್ಯವೂ ಅಭ್ಯಾಸ ಮಾಡಿ
ದ್ದರ ಫಲವಾಗಿ ಹೆಚ್ಚು ಅಂಕ ಬಂದಿದೆ. 620 ಅಂಕಗಳಿಗಿಂತ ಹೆಚ್ಚು ಗಳಿಸುವ ನಿರೀಕ್ಷೆ ಇತ್ತು’ ಎನ್ನುತ್ತಾರೆ ಅನಿತಾ.

ಸಿ.ಚಂದನಾ ಪೋಷಕರು ಶಾಲೆಯ ಶುಲ್ಕ ಪಾವತಿಸಲು ಅಶಕ್ತರಾಗಿದ್ದರು. ತಂದೆ ಚಿಕ್ಕಣ್ಣ ಎಂ.ಎ.ಪದವೀಧರರಾಗಿದ್ದರೂ ನಿರುದ್ಯೋಗಿಯಾಗಿದ್ದಾರೆ. ಚಂದನಾಳ ಪ್ರತಿಭೆಯನ್ನು ಮನಗಂಡು ಶಾಲೆಯ ಅಧ್ಯಕ್ಷ ಟಿ.ಕೆ.ನರಸೇಗೌಡ ಅವರು ಶಾಲಾ ಸಮವಸ್ತ್ರ, ಪುಸ್ತಕಗಳನ್ನು ನೀಡಿ ಉಚಿತವಾಗಿ ಶಿಕ್ಷಣ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.