ADVERTISEMENT

ಗಣೇಶ ವಿಗ್ರಹ ನುಂಗಿದ ಮೂರು ವರ್ಷದ ಬಾಲಕ- ಪ್ರಾಣಾಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 19:54 IST
Last Updated 25 ಜುಲೈ 2021, 19:54 IST
ಬಾಲಕ ನುಂಗಿದ್ದ ವಿಗ್ರಹ
ಬಾಲಕ ನುಂಗಿದ್ದ ವಿಗ್ರಹ   

ಬೆಂಗಳೂರು: ನಗರದಲ್ಲಿ ಮೂರು ವರ್ಷದ ಬಾಲಕ ಗಣೇಶ ವಿಗ್ರಹ ನುಂಗಿದ ಘಟನೆ ನಡೆದಿದ್ದು, ಮಣಿಪಾಲ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ವಿಗ್ರಹವನ್ನು ಹೊರತೆಗೆದಿದ್ದಾರೆ.

ವಿಗ್ರಹ ದೊಂದಿಗೆ ಆಟವಾಡುತ್ತಿದ್ದ ಬಾಲಕ ಅರಿವಿಲ್ಲದೆಯೇ ಅದನ್ನು ನುಂಗಿ, ಆಹಾರ ಸೇವಿಸಲು ಕಷ್ಟಪಡುತ್ತಿದ್ದ. ಎದೆ ಮತ್ತು ಕುತ್ತಿಗೆ ಭಾಗದ ಎಕ್ಸ್‌–ರೇ ನಡೆಸಿ, ವಿಗ್ರಹ ಇರುವ ಜಾಗವನ್ನು ಪತ್ತೆ ಮಾಡಲಾಯಿತು. ಎಂಡೋಸ್ಕೊಪಿಕ್ ವಿಧಾನದ ಮೂಲಕ ವಿಗ್ರಹವನ್ನು ಹೊರತೆಗೆಯಲಾಯಿತು. ಮೂರು ಗಂಟೆಗಳ ಬಳಿಕ ಆಹಾರ ಸೇವಿಸಲು ಅವಕಾಶ ನೀಡಲಾಯಿತು. ಬಾಲಕ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಶ್ರೀಕಾಂತ್ ಕೆ.ಪಿ., ‘ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಗು ಅಸ್ವಸ್ಥವಾಗಿತ್ತು. ಒಂದು ಗಂಟೆಯ ಅವಧಿಯಲ್ಲಿ ವಿಗ್ರಹವನ್ನು ಹೊರತೆಗೆಯಲಾಯಿತು. ಇಲ್ಲವಾದಲ್ಲಿ ಅನ್ನ ನಾಳಕ್ಕೆ ತೊಂದರೆಯಾಗುವ ಸಾಧ್ಯತೆಯಿತ್ತು’ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.