ADVERTISEMENT

ಕುಂಭಮೇಳಕ್ಕೆ ಟಿಕೆಟ್‌ ಬುಕ್ಕಿಂಗ್ ನೆಪದಲ್ಲಿ ಮೋಸ: ಅರ್ಚಕರಿಗೆ ₹1.60 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 23:30 IST
Last Updated 22 ಫೆಬ್ರುವರಿ 2025, 23:30 IST
   

ಬೆಂಗಳೂರು: ಫೇಸ್‌ಬುಕ್ ಜಾಹೀರಾತು ನಂಬಿ ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್​​ ಬುಕ್​​​​ ಮಾಡಿದ್ದ ಅರ್ಚಕರೊಬ್ಬರು ₹ 1.60 ಲಕ್ಷ ಕಳೆದುಕೊಂಡಿದ್ದಾರೆ. 

ವೈಯಾಲಿಕಾವಲ್ ನಿವಾಸಿಯಾದ 42 ವರ್ಷ ವಯಸ್ಸಿನ ಅರ್ಚಕರ ದೂರು ನೀಡಿದ್ದು, ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 

‘ಮಹಾಕುಂಭಮೇಳದಲ್ಲಿ ಭಾಗಿಯಾಗಲು ಫೇಸ್‌ಬುಕ್​ನಲ್ಲಿ ಕಾರ್ತಿಕೇಯನ್​ ಟೂರ್ಸ್​ ಆ್ಯಂಡ್ ಟ್ರಾವೆಲ್ಸ್ ಹೆಸರಿನ ಜಾಹೀರಾತು ಗಮನಿಸಿ ಸಂಪರ್ಕಿಸಲಾಗಿತ್ತು. ಮೊಬೈಲ್‌ನಲ್ಲಿ ಮಾತನಾಡಿದ್ದ ವ್ಯಕ್ತಿ, ಟಿಕೆಟ್​ ಬುಕ್​ ಮಾಡುವುದಾಗಿ ಹಂತ ಹಂತವಾಗಿ ₹1.60 ಲಕ್ಷವನ್ನು ಆನ್‌ಲೈನ್​​ ಮೂಲಕ ಸ್ವೀಕರಿಸಿದ್ದ. ಹಣ ಕೈ ಸೇರಿದ ಬಳಿಕ ಟಿಕೆಟ್​​ ಬುಕ್​​ ಮಾಡಿಕೊಡದೇ ವಂಚಿಸಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.