ADVERTISEMENT

ಆರೋಗ್ಯ ಸಮೀಕ್ಷಾ ತಂಡಗಳಿಗೆ ಇಂದು ತರಬೇತಿ

​ಪ್ರಜಾವಾಣಿ ವಾರ್ತೆ
Published 1 ಮೇ 2020, 22:17 IST
Last Updated 1 ಮೇ 2020, 22:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 'ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಪಾಲಿಕೆಯ ಎಲ್ಲ ವಾರ್ಡ್‍ಗಳಲ್ಲಿ ಸಾರ್ವತ್ರಿಕ ಸಮೀಕ್ಷೆ ನಡೆಸಲು ರಚನೆಯಾಗಿರುವ ಬೂತ್ ಮಟ್ಟದ ತಂಡಗಳಿಗೆ ಇದೇ 2ರಂದು ತರಬೇತಿ ನೀಡಲಾಗುವುದು' ಎಂದು ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೂತ್ ಮಟ್ಟದ ಅಧಿಕಾರಿಗಳು, ಸರ್ಕಾರಿ, ಖಾಸಗಿ, ಅನುದಾನಿತ ಹಾಗೂ ಪಾಲಿಕೆ ವ್ಯಾಪ್ತಿಯ ಶಾಲೆಗಳ ಶಿಕ್ಷಕರು ತಂಡದಲ್ಲಿ ಇರಲಿದ್ದಾರೆ. ಸಮೀಕ್ಷೆ ವೇಳೆ ತೀವ್ರ ಉಸಿರಾಟದ ಸಮಸ್ಯೆ (ಎಸ್‍ಎಆರ್‌ಐ) ಶೀತ, ಜ್ವರಮಾದರಿಯ ಅನಾರೋಗ್ಯ (ಐಎಲ್‍ಐ) ಸಮಸ್ಯೆ ಹೊಂದಿರುವರನ್ನು ಮುಂಚಿತವಾಗಿ ಗುರುತಿಸಲು ತಂಡಗಳನ್ನು ರಚಿಸಲಾಗಿದೆ.

27 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸದರಿ ತಂಡಗಳಿಗೆ ಮೇ 2ರಂದು ತರಬೇತಿ ನೀಡಲಾಗುವುದು. ತಂಡಗಳಲ್ಲಿರುವ ಅಧಿಕಾರಿಗಳ ಹೆಸರು ಹಾಗೂ ಕಾರ್ಯನಿರ್ವಹಿಸಬೇಕಾದ ಸ್ಥಳಗಳ ಮಾಹಿತಿಯನ್ನು ಪಾಲಿಕೆ ವೆಬ್‍ಸೈಟ್ www.bbmp.gov.inನಲ್ಲಿ ಪಡೆಯಬಹುದು. ತರಬೇತಿಗೆ ಹಾಜರಾಗದವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ 1897ರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.