ADVERTISEMENT

ಕೊರೊನಾ ಭೀತಿ: ರಾಜ್ಯದಲ್ಲಿ 32 ರೈಲುಗಳ ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 3:40 IST
Last Updated 20 ಮಾರ್ಚ್ 2020, 3:40 IST
ಬುಧವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಟಿಕೇಟ್‌ ಕೌಂಟರ್‌ನಲ್ಲಿ ವಿಚಾರಿಸಿದ ದೃಶ್ಯ-ಪ್ರಜಾವಾಣಿ ಚಿತ್ರ
ಬುಧವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಟಿಕೇಟ್‌ ಕೌಂಟರ್‌ನಲ್ಲಿ ವಿಚಾರಿಸಿದ ದೃಶ್ಯ-ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯು 32 ರೈಲುಗಳ ಸಂಚಾರವನ್ನು ಮಾರ್ಚ್‌ 31ರವರೆಗೆ ರದ್ದುಪಡಿಸಿದೆ.

ಹುಬ್ಬಳ್ಳಿ–ಕೆಎಸ್‌ಆರ್‌ ಬೆಂಗಳೂರು–ಹುಬ್ಬಳ್ಳಿ (ಜನ್‌ಶತಾಬ್ದಿ ಎಕ್ಸ್‌ಪ್ರೆಸ್‌), ಮೈಸೂರು–ಯಲಹಂಕ– ಮೈಸೂರು (ಮಾಲ್ಗುಡಿ ಎಕ್ಸ್‌ಪ್ರೆಸ್‌), ಯಶವಂತಪುರ–ಪಂಡಾರಪುರ–ಯಶವಂತಪುರ ಎಕ್ಸ್‌ಪ್ರೆಸ್‌, ಮೈಸೂರು–ಕೆಎಸ್‌ಆರ್‌ ಬೆಂಗಳೂರು–ಮೈಸೂರು (ರಾಜ್ಯರಾಣಿ ಎಕ್ಸ್‌ಪ್ರೆಸ್‌), ಶಿವಮೊಗ್ಗ–ಯಶವಂತಪುರ–ಶಿವಮೊಗ್ಗ(ವಾರದಲ್ಲಿ ನಾಲ್ಕು ದಿನ ಸಂಚರಿಸುವ ತತ್ಕಾಲ್ ವಿಶೇಷ ಎಕ್ಸ್‌ಪ್ರೆಸ್‌), ಮೈಸೂರು–ರೇಣಿಗುಂಟಾ–ಮೈಸೂರು (ವಾರದಲ್ಲಿ ಒಂದು ದಿನ), ಮೈಸೂರು– ಶಿರಡಿ– ಮೈಸೂರು (ವಾರದಲ್ಲಿ ಒಂದು ದಿನ) ಎಕ್ಸ್‌ಪ್ರೆಸ್‌, ಯಶವಂತಪುರ–ಮಂಗಳೂರು–ಯಶವಂತಪುರ (ವಾರದಲ್ಲಿ ಒಂದು ದಿನ) ಎಕ್ಸ್‌ಪ್ರೆಸ್‌, ಬೆಳಗಾವಿ–ಮೈಸೂರು–ಬೆಳಗಾವಿ (ವಿಶ್ವಮಾನವ ಎಕ್ಸ್‌ಪ್ರೆಸ್‌) ಸೇರಿ 32 ರೈಲುಗಳ ಸಂಚಾರ ರದ್ದಾಗಿದೆ.

ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಕೆಲ ರೈಲುಗಳಲ್ಲಿ ಶೇ 1ರಷ್ಟು ಪ್ರಯಾಣಿಕರೂ ಬುಕ್ಕಿಂಗ್ ಮಾಡಿಸದೆ ಇರುವುದು ಕಂಡುಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.