ADVERTISEMENT

ರಸ್ತೆ ವಿಭಜಕಕ್ಕೆ ಲಾರಿ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:25 IST
Last Updated 19 ಆಗಸ್ಟ್ 2019, 20:25 IST
ಲಾರಿಯಲ್ಲಿದ್ದ ಕಚ್ಚಾ ವಸ್ತುಗಳು ರಸ್ತೆಯ ಮೇಲೆ ಬಿದ್ದಿರುವುದು
ಲಾರಿಯಲ್ಲಿದ್ದ ಕಚ್ಚಾ ವಸ್ತುಗಳು ರಸ್ತೆಯ ಮೇಲೆ ಬಿದ್ದಿರುವುದು   

ದಾಬಸ್ ಪೇಟೆ:ರಾಷ್ಟ್ರೀಯ ಹೆದ್ದಾರಿ 4ರ ಕುಲಹವನಹಳ್ಳಿ ಬಳಿ ಸೋಮವಾರ ಬೆಳಿಗ್ಗೆ ಲಾರಿಯೊಂದು ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸರಕುಗಳು ರಸ್ತೆಗೆ ಬಿದ್ದು, ಸಂಚಾರ ದಟ್ಟಣೆ ಉಂಟಾಯಿತು.

ಬಟ್ಟೆ ತಯಾರಿಸುವ ಕಚ್ಚಾ ವಸ್ತುಗಳಿದ್ದ ಲಾರಿ ತುಮಕೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಮಳೆ ಬರುತ್ತಿದ್ದರಿಂದ ಚಾಲಕನಿಗೆ ವಿಭಜಕ ಸರಿಯಾಗಿ ಕಾಣದಿರುವುದು ಅವಘಡಕ್ಕೆ ಕಾರಣವಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.

ಕಚ್ಚಾ ವಸ್ತುಗಳು ರಸ್ತೆಗೆ ಬಿದ್ದುದರಿಂದ ಸಂಚಾರ ದಟ್ಟಣೆ ಉಂಟಾಗಿದ್ದು, ಕಿ.ಮೀ.ಗಟ್ಟಲೇ ವಾಹನಗಳು ನಿಂತಿದ್ದವು. ನೆಲಮಂಗಲದ ಸಂಚಾರ ಪೊಲೀಸರು ಬಂದು ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.