ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನಗರದೊಳಗಿನ ಸಂಚಾರ ದಟ್ಟಣೆಯನ್ನು ತಗ್ಗಿಸುವ ಉದ್ದೇಶದಿಂದ ಸುರಂಗ ರಸ್ತೆ ನಿರ್ಮಿಸುವ ಪರಿಪಾಟ ಜಗತ್ತಿನ ಹಲವೆಡೆ ನಾಲ್ಕಾರು ದಶಕಗಳಿಂದಲೇ ಇದೆ. ಯೂರೋಪ್, ಉತ್ತರ ಅಮೆರಿಕ, ಆಗ್ನೇಯ ಏಷ್ಯಾದ ದೇಶಗಳು ಮತ್ತು ಆಸ್ಟ್ರೇಲಿಯಾದಲ್ಲಿ ಇಂತಹ ದೊಡ್ಡ ಜಾಲವೇ ಇದೆ. ಜಗತ್ತಿನ ಕೆಲ ಪ್ರಮುಖ ಸುರಂಗ ರಸ್ತೆ ಜಾಲ ಮತ್ತು ಅವುಗಳ ಸಾಧಕ–ಬಾಧಕಗಳ ವಿವರ ಈ ಮುಂದಿನಂತಿದೆ.
ಜಪಾನ್‌ನ ರಾಜಧಾನಿ ಟೋಕಿಯೋದ ಮೇಲ್ಮೈನಿಂದ ಸುಮಾರು 50 ಮೀಟರ್ ಆಳದಲ್ಲಿ ನಿರ್ಮಿಸಲಾಗಿರುವ ಸುರಂಗ ಮಾರ್ಗವಿದು. ನಗರದ ವ್ಯಾಪ್ತಿಯಲ್ಲಿ ಇರುವ ಜಗತ್ತಿನ ಅತ್ಯಂತ ಉದ್ದದ ಸುರಂಗ ರಸ್ತೆ ಇದು ಎಂಬುದು ಯಾಮಾಟೆಯ ಹೆಗ್ಗಳಿಕೆ.
ಕೇಂದ್ರ ಟೋಕಿಯೊದಿಂದ ದಕ್ಷಿಣ ಟೋಕಿಯೊಗೆ ನೇರ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಆರಂಭವಾಗಿದ್ದು 1971ರಲ್ಲಿ. ಆದರೆ ಕಾಮಗಾರಿ ಪೂರ್ಣಗೊಂಡಿದ್ದು 2015ರಲ್ಲಿ. ಜನದಟ್ಟಣೆ ಮತ್ತು ವಸತಿ ಪ್ರದೇಶ ಅತೀವವಾಗಿರುವ ನಗರದಾಳದಲ್ಲಿ ನಿರ್ಮಿಸಬೇಕಿದ್ದ ಕಾರಣ, ಕಾಮಗಾರಿ ವಿಪರೀತ ವಿಳಂಬವಾಯಿತು. ಯೋಜನಾ ವೆಚ್ಚ ನೂರಕ್ಕಿಂತಲೂ ಅಧಿಕಪಟ್ಟು ಹೆಚ್ಚಾಯಿತು.
ಆರಂಭದಲ್ಲಿ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ, ಅತೀವ ಕಾಮಗಾರಿ ವೆಚ್ಚ ಮತ್ತು ನಿರ್ವಹಣಾ ವೆಚ್ಚ ಭರಿಸಲಾಗದೆ ಅಲ್ಲಿನ ಸ್ಥಳೀಯಾಡಳಿತವು 2018ರಲ್ಲಿ ಬಳಕೆದಾರರ ಶುಲ್ಕ ವಿಧಿಸಿತು. ಪರಿಣಾಮವಾಗಿ ಬಳಕೆದಾರರ ಸಂಖ್ಯೆ ಕಡಿಮೆಯಾಯಿತು. ಭೂಕಂಪದ ಸಾಧ್ಯತೆ ಅತ್ಯಧಿಕವಾಗಿರುವ ಟೋಕಿಯೊದಲ್ಲಿನ ಸುರಂಗದಲ್ಲಿ ಪ್ರಯಾಣಿಸುವುದು ಅಪಾಯ ಎಂಬ ಮಾತೂ ಇದೆ.
18.2 ಕಿ.ಮೀ.- ಸುರಂಗಮಾರ್ಗದ ಉದ್ದ
ಸ್ಪೇನ್‌ನ ಮ್ಯಾಡ್ರಿಡ್ ನಗರದಡಿ ಹಬ್ಬಿರುವ ಎಂ–5 ಸುರಂಗ ಮಾರ್ಗ ಜಾಲವು ಜಗತ್ತಿನಲ್ಲೇ ಅತ್ಯಂತ ದೊಡ್ಡದು. ಒಟ್ಟು 56 ಕಿ.ಮೀ.ನಷ್ಟು ಉದ್ದದ ಜಾಲವಿದ್ದರೂ, ಸುರಂಗ ಮಾರ್ಗವೊಂದರ ಗರಿಷ್ಠ ಉದ್ದ 3.6 ಕಿ.ಮೀ. ಮಾತ್ರ. ಇಂತಹ ಹತ್ತಾರು ಸುರಂಗ ಮಾರ್ಗಗಳು ಮ್ಯಾಡ್ರಿಡ್‌ನ ಅಡಿಯಲ್ಲಿವೆ.
ನಗರದ ಕೇಂದ್ರ ಭಾಗ ಮತ್ತು ದಕ್ಷಿಣ ಭಾಗದಲ್ಲಿ ಜನದಟ್ಟಣೆ, ಸಂಚಾರ ದಟ್ಟಣೆ ಹೆಚ್ಚು. ಅವುಗಳ ನಿಯಂತ್ರಣಕ್ಕೆ ಎಂದು ಸಣ್ಣ ಸಣ್ಣ ಸುರಂಗಗಳನ್ನು ನಿರ್ಮಿಸುವ ಯೋಜನೆಯನ್ನು ಸ್ಪೇನ್ 90ರ ದಶಕದಲ್ಲಿ ಆರಂಭಿಸಿತು. ಈ ಯೋಜನೆಗಳು ಅಲ್ಲಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿದರೂ, ಪ್ರವೇಶದ್ವಾರಗಳ ನಂತರದ ರಸ್ತೆಗಳಲ್ಲಿ ದಟ್ಟಣೆಯನ್ನು ಹೆಚ್ಚಿಸಿದವು.
ಈ ಸಮಸ್ಯೆಯನ್ನು ಬಗೆಹರಿಸಲು ಇನ್ನಷ್ಟು ಸುರಂಗ ಮಾರ್ಗಗಳನ್ನು ನಿರ್ಮಿಸಲಾಯಿತು. ಆದರೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಹೋದುದರಿಂದ ಮ್ಯಾಡ್ರಿಡ್ ಜಗತ್ತಿನಲ್ಲೇ ಅತ್ಯಂತ ಉದ್ದದ ಸುರಂಗ ರಸ್ತೆ ಮಾರ್ಗ ಜಾಲ ಹೊಂದುವಂತಾಗಿದೆ.
56 ಕಿ.ಮೀ., ಮ್ಯಾಡ್ರಿಡ್‌ನ ಅಡಿಯಲ್ಲಿರುವ ಸುರಂಗ ರಸ್ತೆ ಜಾಲದ ಒಟ್ಟು ಉದ್ದ

ನಗರದ ವ್ಯಾಪ್ತಿಯಲ್ಲಿಯೇ ನೆಲದಾಳದ ಸುರಂಗ ರಸ್ತೆ ಮಾರ್ಗಗಳನ್ನು ಹೊಂದಿರುವ ದೇಶದ ಏಕೈಕ ನಗರ ದೆಹಲಿ (ಮುಂಬೈನಲ್ಲಿ ಸಾಗರದಾಳದಲ್ಲಿ, ಜೈಪುರದಲ್ಲಿ ಬೆಟ್ಟವನ್ನು ಕೊರೆದು ನಿರ್ಮಿಸಿದ ಸುರಂಗ ರಸ್ತೆಗಳಿವೆ).
ದೆಹಲಿಯ ಪ್ರಗತಿ ಮೈದಾನ ಮತ್ತು ಇಂಡಿಯಾ ಗೇಟ್ ಮಧ್ಯೆ ನಿರ್ಮಿಸಲಾಗಿರುವ 1.3 ಕಿ.ಮೀ. ಉದ್ದದ ಸುರಂಗ ರಸ್ತೆ ಮಾರ್ಗಕ್ಕೆ ಬಳಕೆದಾರರ ಶುಲ್ಕ ಇಲ್ಲ. ಆದರೆ ವಿನ್ಯಾಸದ ಸಮಸ್ಯೆಯ ಕಾರಣಕ್ಕೆ ಭಾರಿ ಮಳೆ ಬಂದಾಗಲೆಲ್ಲಾ ಸುರಂಗದಲ್ಲಿ ನೀರು ತುಂಬಿಕೊಳ್ಳುತ್ತದೆ. ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ನಿರ್ಮಿಸಿರುವ ದ್ವಾರಕಾ ಸುರಂಗ ರಸ್ತೆ ಮಾರ್ಗವು 3.6 ಕಿ.ಮೀ.ನಷ್ಟಿದೆ. ಇದೇ ಜೂನ್ 5ರಂದು ಇದು ಬಳಕೆಗೆ ಮುಕ್ತವಾಗಿದ್ದು, ಯಾವುದೇ ಶುಲ್ಕ ವಿಧಿಸುತ್ತಿಲ್ಲ.
ಅಮೆರಿಕದ ಬಹುತೇಕ ರಾಜ್ಯಗಳ ರಾಜಧಾನಿಗಳ ಅಡಿಯಲ್ಲಿ ಸುರಂಗ ರಸ್ತೆ ಮಾರ್ಗಗಳಿವೆ. 60ರ ದಶಕದಿಂದ ತೀರಾ ಈಚಿನವರೆಗೂ ಅಮೆರಿಕವು ಇಂತಹ ಸುರಂಗ ರಸ್ತೆಗಳನ್ನು ನಿರ್ಮಿಸಿದೆ. ಸುರಂಗ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಿದಂತೆ, ಮೇಲ್ಮೈ ರಸ್ತೆಗಳಲ್ಲಿ ಸಂಚಾರ ಕಡಿಮೆಯಾಗಿದೆ. ಇದರಿಂದ ವ್ಯಾಪಾರ ವಹಿವಾಟು ಕುಗ್ಗಿದೆ. ಇದನ್ನು ತಪ್ಪಿಸಲು ಹಲವು ಸುರಂಗ ರಸ್ತೆಗಳನ್ನು ಮುಚ್ಚಲಾಗಿದೆ
ಐರೋಪ್ಯ ದೇಶಗಳಲ್ಲಿನ ನಗರದಡಿಯ ಸುರಂಗ ರಸ್ತೆಗಳ ಬಳಕೆ ಹೆಚ್ಚಾದಂತೆ ವ್ಯಾಪಾರವೂ ಕುಸಿದು, ಆಸ್ತಿಗಳ ಮೌಲ್ಯ ಸ್ಥಗಿತವಾದ ಸ್ಥಿತಿ (ಬರ್ಲಿನ್, ಪ್ಯಾರಿಸ್) ಎದುರಾಗಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಬಳಕೆದಾರರ ಶುಲ್ಕವನ್ನು ಹಲವು ಪಟ್ಟು ಏರಿಕೆ ಮಾಡಲಾಗಿತ್ತು
ನಗರದ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ನೇರ ಸಂಪರ್ಕ ಕಲ್ಪಿಸುವ ಸುರಂಗ ರಸ್ತೆಗಳು ಇರುವ ಕಡೆ ಮಾತ್ರ ಸಂಚಾರ ದಟ್ಟಣೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ನಗರದೊಳಗೇ ವಿವಿಧೆಡೆಗೆ ಸಂಪರ್ಕ ಕಲ್ಪಿಸುವ ಸುರಂಗ ರಸ್ತೆಗಳ ಹೊರ ಭಾಗದಲ್ಲಿ ದಟ್ಟಣೆ ಹೆಚ್ಚಾಗಿದೆ
ಸುರಂಗ ಮಾರ್ಗಗಳನ್ನು ತ್ವರಿತವಾಗಿ ನಿರ್ಮಿಸಿದ್ದ ಕಡೆ ಮಾತ್ರ ಅವುಗಳಿಂದ ಅನುಕೂಲವಾಗಿದೆ. ಕಾಮಗಾರಿ ವಿಳಂಬವಾದರೆ ನಿರ್ಮಾಣ ವೆಚ್ಚ ಹೆಚ್ಚುತ್ತದೆ. ಜತೆಗೆ ಅವು ಸಿದ್ಧವಾಗುವ ಹೊತ್ತಿಗೆ ವಾಹನಗಳ ಸಂಖ್ಯೆ ಹಲವು ಪಟ್ಟು ಏರಿಕೆಯಾಗಿ, ದಟ್ಟಣೆ ಇನ್ನಷ್ಟು ಬಿಗಡಾಯಿಸಿದ ಉದಾಹರಣೆಗಳೂ ಇವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.