(ಸಾಂದರ್ಭಿಕ ಚಿತ್ರ)
ಬೆಂಗಳೂರು: ವಾಯುದಾಳಿಯಾದ ಸಂದರ್ಭಗಳಲ್ಲಿ ನಾಗರಿಕರು ಹೇಗೆ ಸ್ವರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಕುರಿತು ನಗರದ ಹಲವು ಕಡೆ ಹಂತ ಹಂತವಾಗಿ ‘ಆಪರೇಷನ್ ಅಭ್ಯಾಸ್’ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬುಧವಾರ ಮಧ್ಯಾಹ್ನ ಹಲಸೂರಿನ ನಾಗರಿಕ ರಕ್ಷಣಾ ಕೇಂದ್ರದಲ್ಲಿ ಮಾತ್ರ ತಾಲೀಮು ನಡೆಸಲಾಗುತ್ತಿದೆ. ಉಳಿದ ಸ್ಥಳಗಳಲ್ಲಿ ಹಂತಹಂತವಾಗಿ ಸೈರನ್ ಮೊಳಗಿಸಲು ನಿರ್ಧರಿಸಲಾಗಿದೆ.
ವಾಯು ದಾಳಿಯಂತಹ ಸಂದರ್ಭಗಳಲ್ಲಿ ಶತ್ರುಗಳಿಗೆ ಜನಸಂಖ್ಯೆಯಿರುವ ಸ್ಥಳಗಳ ಗುರುತು ಸಿಗದಂತೆ ತಡೆಯಲು ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ದೀಪಗಳು ಸಂಪೂರ್ಣ ಬಂದ್ ಆಗಲಿವೆ. ಜತೆಗೆ, ರಾತ್ರಿ ವೇಳೆ ವಾಹನ ಸಂಚಾರ ಸ್ಥಗಿತವಾಗಲಿದೆ. ಗುರುತಿಸಲಾದ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ಜತೆಗೆ, ಕಟ್ಟಡಗಳಲ್ಲಿ ಅಗ್ನಿ ಅವಘಡ ತಡೆಯುವುದು, ರಕ್ಷಣಾ ಕಾರ್ಯಾಚರಣೆ, ಹಾನಿಗೊಂಡ ಕಟ್ಟಡಗಳಿಂದ ಸಾರ್ವಜನಿಕರ ರಕ್ಷಣೆ, ತಾತ್ಕಾಲಿಕ ಆಸ್ಪತ್ರೆ ವ್ಯವಸ್ಥೆ, ಕೆಲವು ಬಂಕರ್‌ಗಳಲ್ಲಿ ಸಾರ್ವಜನಿಕರ ಅಡಗಿಸಿಡುವುದು ಮಾಡಲಾಗುತ್ತದೆ. ಈ ಕುರಿತು ತಾಲೀಮು ವೇಳೆ ನಾಗರಿಕರಿಗೆ ಮಾಹಿತಿ ನೀಡಲಾಗುವುದು ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ವಿದ್ಯುತ್ ದೀಪ್ ಬಂದ್ ಮಾಡಿ ತಾಲೀಮು: ಹಲಸೂರು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ವಿದ್ಯುತ್ ದೀಪಗಳನ್ನು ಬಂದ್ ಮಾಡಿ ಸ್ವರಕ್ಷಣೆ ಕುರಿತು ತಾಲೀಮು ನಡೆಸುವ ಸಾಧ್ಯತೆಯಿದೆ.
ಸೈರನ್ ಇರುವ ಸ್ಥಳಗಳು
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್
ಸಿಕ್ಯುಎಎಲ್
ಇಎಸ್ಐ ಆಸ್ಪತ್ರೆ, ರಾಜಾಜಿನಗರ
ಎನ್‌ಎಎಲ್
ಬೆಂಗಳೂರು ಡೇರಿ
ಕೆನರಾ ಬ್ಯಾಂಕ್, ಪುರಭವನ ವೃತ್ತ
ಎಸ್‌ಆರ್‌ಎಸ್, ಪೀಣ್ಯ
ವಿ.ವಿ ಟವರ್, ಅಗ್ನಿಶಾಮಕ ಠಾಣೆ
ಜ್ಞಾನಭಾರತಿ, ಅಗ್ನಿಶಾಮಕ ಠಾಣೆ (ನಾಗರಬಾವಿ)
ಥಣಿಸಂದ್ರ ಅಗ್ನಿಶಾಮಕ ಠಾಣೆ, ಹೆಬ್ಬಾಳ
ಬಾಣಸವಾಡಿ, ಅಗ್ನಿಶಾಮಕ ಠಾಣೆ
ಯಶವಂತಪುರ ಅಗ್ನಿಶಾಮಕ ಠಾಣೆ
ಬನಶಂಕರಿ ಅಗ್ನಿಶಾಮಕ ಠಾಣೆ
ರಾಜಾಜಿನಗರ ಅಗ್ನಿಶಾಮಕ ಠಾಣೆ
ಚಾಮರಾಜಪೇಟೆ ಅಗ್ನಿಶಾಮಕ ಠಾಣೆ
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ
ಹಲಸೂರು ಗೇಟ್ ಪೊಲೀಸ್ ಠಾಣೆ
ಹಲಸೂರು ಪೊಲೀಸ್ ಠಾಣೆ
ಉಪ್ಪಾರಪೇಟೆ ಪೊಲೀಸ್ ಠಾಣೆ
ರಾಜರಾಜೇಶ್ವರಿ ಪೊಲೀಸ್ ಠಾಣೆ
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆ
ವಯಾಲಿಕಾವಲ್ ಪೊಲೀಸ್ ಠಾಣೆ
ಹಲಸೂರು ಗೃಹರಕ್ಷಕ ದಳ, ಕೇಂದ್ರ ಕಚೇರಿ
ಬೆಂಗಳೂರು ಗ್ರಾಮಾಂತರ ಗೃಹರಕ್ಷಕ ದಳ ಕಚೇರಿ
ಬಾಗಲೂರು ಅಗ್ನಿಶಾಮಕ ದಳ ಕಚೇರಿ(ಯಲಹಂಕ)
ಪೀಣ್ಯ ಅಗ್ನಿಶಾಮಕ ಠಾಣೆ
ಅಂಜನಾಪುರ ಠಾಣೆ
ಐಟಿಪಿಎಲ್ ಅಗ್ನಿಶಾಮಕ ಠಾಣೆ (ವೈಟ್‌ಫೀಲ್ಡ್)
ಸರ್ಜಾಪುರ ಅಗ್ನಿಶಾಮಕ ಠಾಣೆ
ಎಲೆಕ್ಟ್ರಾನಿಕ್ ಅಗ್ನಿಶಾಮಕ ಠಾಣೆ
ಡೇರಿ ಸರ್ಕಲ್ ಅಗ್ನಿಶಾಮಕ ಠಾಣೆ(ಜಯನಗರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.