ADVERTISEMENT

ಬೆಂಗಳೂರು: ಇಬ್ಬರು ಡ್ರಗ್ಸ್‌ ಪೆಡ್ಲರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ವಿದೇಶಿ ಪ್ರಜೆಗಳಿಂದ ಮಾದಕ ವಸ್ತು ಖರೀದಿಸಿ ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಜೆ.ಜೆ.ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

‘ಪಾದರಾಯನಪುರದ ನಿವಾಸಿಗಳಾದ ಮಹಮ್ಮದ್ ಆದಿಲ್ (25), ಮುದಾಸೀರ್‌ ಪಾಷಾ ಅಲಿಯಾಸ್‌ ಕಿಂಗ್‌ ಬಂಧಿತರು. ಇವರಿಂದ 21 ಗ್ರಾಂ ಎಂಡಿಎಂಎ, ಎಲೆಕ್ಟ್ರಾನಿಕ್‌ ತೂಕದ ಯಂತ್ರ, ₹3 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಬಾಣಸವಾಡಿ ಮತ್ತು ನೆಲಮಂಗಲದಲ್ಲಿ ವಾಸವಾಗಿರುವ ನೈಜಿರಿಯಾ ಪ್ರಜೆಗಳೊಂದಿಗೆ ಆರೋಪಿಗಳು ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದರು. ಡ್ರಗ್ಸ್‌ ಖರೀದಿಸಲು ನೈಜಿರಿಯಾ ಪ್ರಜೆಗಳಿಗೆ ಕರೆ ಮಾಡುತ್ತಿದ್ದರು. ಬಳಿಕ ವಿದೇಶಿ ಪ್ರಜೆಗಳು ಒಂದು ನಿಗದಿತ ಸ್ಥಳದಲ್ಲಿ ಡ್ರಗ್ಸ್‌ ಇಟ್ಟು ಆರೋಪಿಗಳಿಗೆ ಲೋಕೇಷನ್‌ ಕಳುಹಿಸುತ್ತಿದ್ದರು. ನಂತರ ಆರೋಪಿಗಳು ಆನ್‌ಲೈನ್‌ ಮೂಲಕ ವಿದೇಶಿಗರಿಗೆ ಹಣ ಕಳುಹಿಸಿ, ಡ್ರಗ್ಸ್‌ ತಂದು ಬೇರೆಯವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು’ ಎಂದು ತಿಳಿಸಿದರು.

‘ಇತ್ತೀಚೆಗೆ ವಿ.ಎಸ್.ಗಾರ್ಡನ್‌ ನಾಗರಕಲ್ಲು ದೇವಸ್ಥಾನ ಸಮೀಪದಲ್ಲಿ ಡ್ರಗ್ಸ್‌ ಮಾರಾಟ ಯತ್ನ ಕುರಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ಮಹಮ್ಮದ್‌ ಆದಿಲ್‌ ವಿರುದ್ಧ ಈಗಾಗಲೇ ವಿವಿಧ ಠಾಣೆಗಳಲ್ಲಿ ಮೂರು ಡ್ರಗ್ಸ್‌ ಮಾರಾಟ ಪ್ರಕರಣಗಳು ದಾಖಲಾಗಿವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.