ADVERTISEMENT

ಕಿಡ್ನಿ ಕಲ್ಲು ಚಿಕಿತ್ಸೆ: ಯುನೈಟೆಡ್‌ ಆಸ್ಪತ್ರೆಯಲ್ಲಿ ವಿಶೇಷ ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 16:31 IST
Last Updated 7 ಫೆಬ್ರುವರಿ 2022, 16:31 IST

ಬೆಂಗಳೂರು: ವಿಶ್ವ ಇಎಸ್‌ಡಬ್ಲ್ಯುಎಲ್‌ ದಿನಾಚರಣೆ ಪ್ರಯುಕ್ತ ಜಯನಗರದ ಯುನೈಟೆಡ್‌ ಆಸ್ಪತ್ರೆಯು ಕಿಡ್ನಿ ಕಲ್ಲು ಚಿಕಿತ್ಸೆ ಪಡೆಯುವವರಿಗೆ ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಿದೆ.

‘ಆಸ್ಪತ್ರೆಯು ಎಕ್ಸ್ಟ್ರಾಕಾರ್ಪೋರಿಯಲ್ ಶಾಕ್‌ವೇವ್‌ ಲಿಥೋರ್ಟಿಪ್ಸಿ ಚಿಕಿತ್ಸಾ ವಿಧಾನ ಅಳವಡಿಸಿಕೊಂಡಿದೆ. ಇದರಿಂದ ಶಸ್ತ್ರಚಿಕಿತ್ಸೆ ಇಲ್ಲದೆಯೇ ಕಿಡ್ನಿಯೊಳಗಿನ ಕಲ್ಲು ಸುಲಭವಾಗಿ ಕರಗಿಸಬಹುದಾಗಿದೆ. ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಈ ಉದ್ದೇಶದಿಂದಲೇ ರಿಯಾಯಿತಿ ಪ್ರಕಟಿಸಿದ್ದೇವೆ’ ಎಂದು ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ.ರಾಜೀವ್‌ ಬಾಶೆಟ್ಟಿ ತಿಳಿಸಿದರು.

ಹೆಚ್ಚಿನ ಮಾಹಿತಿಗೆ 9916977777 ಅಥವಾ info@unitedhospital.in ಗೆ ಇ–ಮೇಲ್‌ ಕಳುಹಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.