ಬೆಂಗಳೂರು: ಉಪಾಸನಾ ಸಂಸ್ಥೆ ನೀಡುವ ‘ಉಪಾಸನಾ ಪ್ರಶಸ್ತಿ’ಗೆ ಅಪರ್ಣಾ ನರೇಂದ್ರ ಹಾಗೂ ‘ಗಾನೋಪಾಸನಾ ಪ್ರಶಸ್ತಿ’ಗೆ ವರ್ಷ ಸುರೇಶ್ ಮತ್ತು ಮೇಘನಾ ಭಟ್ ಆಯ್ಕೆಯಾಗಿದ್ದಾರೆ.
ಮೂವರು ಗಾಯಕಿಯರಾಗಿದ್ದಾರೆ. ನಗರದ ಎನ್.ಆರ್. ಕಾಲೊನಿಯ ಪತ್ತಿ ಸಭಾಂಗಣದಲ್ಲಿ ಇದೇ 26ರಂದು ಸಂಜೆ 6 ಗಂಟೆಗೆ ನಡೆಯಲಿರುವ ಸಂಸ್ಥೆಯ 26ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಸುಗಮ ಸಂಗೀತ ಗಾಯಕಿ ಮಾಲತಿ ಶರ್ಮಾ, ಕವಯತ್ರಿ ರಂಜನಿಪ್ರಭು ಹಾಗೂ ಉಪಾಸನಾ ಸಂಸ್ಥೆಯ ಗೌರವಾಧ್ಯಕ್ಷೆ ವಿ.ಎಸ್. ಭಾಗ್ಯಲಕ್ಷ್ಮೀ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಉಪಾಸನಾ ಸಂಸ್ಥೆಯ ಸಂಸ್ಥಾಪಕ ಉಪಾಸನಾ ಮೋಹನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.