ADVERTISEMENT

‘ಯುಪಿಎಸ್‌ಸಿ ಪರೀಕ್ಷೆ: ಇಂಡಿಯಾ ಫಾರ್ ಐ.ಎ.ಎಸ್’ನ 21 ವಿದ್ಯಾರ್ಥಿಗಳು ತೇರ್ಗಡೆ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 22:27 IST
Last Updated 25 ಸೆಪ್ಟೆಂಬರ್ 2021, 22:27 IST
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ‘ಇಂಡಿಯಾ ಫಾರ್ ಐ.ಎ.ಎಸ್’ ಅಕಾಡೆಮಿಯ ಅಭ್ಯರ್ಥಿಗಳಾದ ಬಿಂದು,ಸಂದೀಪ್,ಸೂರಜ್ ಡಿ. ಮತ್ತು ಸಂತೋಷ್ ಅವರನ್ನು ಡಾ.ಸಿ.ಎಸ್.ಕೇದಾರ್ ಅಭಿನಂದಿಸಿದರು.ಅಕಾಡೆಮಿಯ ಸಂಸ್ಥಾಪಕ ಶ್ರೀನಿವಾಸ್, ನಿರ್ದೇಶಕ ಬಾಬು ಸಂದೀಪ್ ಇದ್ದರು

ಬೆಂಗಳೂರು:ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ನಡೆಸಿದ 2020ನೇ ಸಾಲಿನ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯಲ್ಲಿ ‘ಇಂಡಿಯಾ ಫಾರ್ ಐ.ಎ.ಎಸ್’ ಅಕಾಡೆಮಿಯ 21 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.

ಶನಿವಾರಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷಡಾ.ಸಿ.ಎಸ್. ಕೇದಾರ್, ‘ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ರಾಜ್ಯದ ಅಭ್ಯರ್ಥಿಗಳಲ್ಲಿ ಬಹುತೇಕರು ಕಿರಿಯ ವಯಸ್ಸಿನವರು. ಅವರಿಗೆ ಹೆಚ್ಚಿನ ಅವಧಿ ಸೇವೆ ಸಲ್ಲಿಸಲು ಅವಕಾಶ ಸಿಗಲಿದೆ. ಬಡ ಕುಟುಂಬದ ಅಭ್ಯರ್ಥಿಗಳಿಗೆ ದೂರದ ದೆಹಲಿಗೆ ತೆರಳಿ, ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಲ್ಲಿಯೇ ತರಬೇತಿ ಆರಂಭಿಸಲಾಯಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT