ADVERTISEMENT

ಆಟೊ ಓಡಾಟ: ಇಂದಿರಾನಗರದಲ್ಲಿ ಮಸಾಲೆ ದೋಸೆ ಕಾಫಿ ಸವಿದ ‌ಅಮೆರಿಕ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 22:30 IST
Last Updated 17 ಫೆಬ್ರುವರಿ 2026, 22:30 IST
ಭಾರತಕ್ಕೆ ನಿಯೋಜನೆಗೊಂಡಿರುವ ಅಮೆರಿಕ ರಾಯಭಾರಿ ಸರ್ಗಿಯೊ ಗೋರ್‌ ಅವರು ಸಂಸದ ತೇಜಸ್ವಿಸೂರ್ಯ ಜತೆ ಬೆಂಗಳೂರಿನಲ್ಲಿ ಮಂಗಳವಾರ ಆಟೊದಲ್ಲಿ ಓಡಾಡಿದರು
ಭಾರತಕ್ಕೆ ನಿಯೋಜನೆಗೊಂಡಿರುವ ಅಮೆರಿಕ ರಾಯಭಾರಿ ಸರ್ಗಿಯೊ ಗೋರ್‌ ಅವರು ಸಂಸದ ತೇಜಸ್ವಿಸೂರ್ಯ ಜತೆ ಬೆಂಗಳೂರಿನಲ್ಲಿ ಮಂಗಳವಾರ ಆಟೊದಲ್ಲಿ ಓಡಾಡಿದರು   

ಬೆಂಗಳೂರು: ಭಾರತಕ್ಕೆ ನಿಯೋಜನೆಗೊಂಡಿರು ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಅವರು ನಗರಕ್ಕೆ ಮಂಗಳವಾರ ಭೇಟಿ ನೀಡಿದ್ದು, ಸಂಸದ ತೇಜಸ್ವಿ ಸೂರ್ಯ ಅವರ ಜತೆಗೆ ಆಟೊದಲ್ಲಿ ಸಂಚರಿಸಿದರು.

ಬಳಿಕ ಇಂದಿರಾನಗರದ ಹೋಟೆಲ್‌ವೊಂದಕ್ಕೆ ಸರ್ಗಿಯೊ ಗೋರ್ ಅವರು ತೆರಳಿ ಮಸಾಲೆ ದೋಸೆ ಹಾಗೂ ಕಾಫಿ ಸವಿದರು. ‌

‘ಭಾರತ, ಅಮೆರಿಕದ ಬಾಂಧವ್ಯ, ವ್ಯಾಪಾರ, ತಂತ್ರಜ್ಞಾನ ಹಾಗೂ ಹೊಸ ಸಂಶೋಧನೆಗಳ ಬಗ್ಗೆ ಸರ್ಗಿಯೊ ಗೋರ್  ಅವರೊಂದಿಗೆ ಚರ್ಚಿಸಲಾಯಿತು. ಅವರಿಗೆ ‘ನಮ್ಮ ಆಟೊ’ ಪರಿಚಯಿಸಲಾಯಿತು. ಅವರೊಂದಿಗೆ ನಡೆಸಿದ ಆಟೊ ಸಂಚಾರವು ಸ್ಮರಣೀಯವಾಗಿತ್ತು’ ಎಂದು ತೇಜಸ್ವಿ ಸೂರ್ಯ ಅವರು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ADVERTISEMENT

‘ಬೆಂಗಳೂರು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಆದರೂ, ಸಂಪ್ರದಾಯವನ್ನು ಮರೆತಿಲ್ಲ. ದೇಶದ ಸಾಫ್ಟ್‌ವೇರ್‌ ಕ್ಷೇತ್ರದ ರಫ್ತಿನ ಪ್ರಮಾಣದಲ್ಲಿ ಬೆಂಗಳೂರಿನ ಪಾಲು ಶೇ 43ರಷ್ಟು ಇದೆ. ಭಾರತ ಹಾಗೂ ಅಮೆರಿಕದ ಆರ್ಥಿಕ ಸಂಬಂಧ ಗಟ್ಟಿಗೊಳ್ಳಲು ನಗರವು ಮಹತ್ವದ ಕೊಡುಗೆ ನೀಡುತ್ತಿದೆ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.