ADVERTISEMENT

ಉತ್ಥಾನ ಕಥಾಸ್ಪರ್ಧೆ: ಕರುಣಾಕರ ಹಬ್ಬುಮನೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 16:13 IST
Last Updated 29 ಡಿಸೆಂಬರ್ 2022, 16:13 IST
ಕರುಣಾಕರ ಹಬ್ಬುಮನೆ
ಕರುಣಾಕರ ಹಬ್ಬುಮನೆ   

ಬೆಂಗಳೂರು: ‘ಉತ್ಥಾನ’ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕರುಣಾಕರ ಹಬ್ಬುಮನೆ ಅವರ ‘ಒಂದು ಸಂಸ್ಕಾರದ ಕಥೆ’ಪ್ರಥಮ ಬಹುಮಾನ ಪಡೆದಿದೆ.

ಈ ವರ್ಷ398 ಕಥೆಗಳು ಸ್ಪರ್ಧೆಯಲ್ಲಿದ್ದವು.ಅಂಕಣಕಾರ ಪ್ರೇಮಶೇಖರ ಅವರು ಬಹುಮಾನಕ್ಕೆ ಕಥೆಗಳನ್ನು ಆಯ್ಕೆ ಮಾಡಿದ್ದಾರೆ. ಪ್ರಥಮ ಬಹುಮಾನ ₹ 15 ಸಾವಿರ ನಗದು ಒಳಗೊಂಡಿದೆ.ಯಾದಗಿರಿಯ ಶಿವವಿಷ್ಣು ವಲ್ಲಭ ಅವರ ‘ಜಂಬುಕೇಶನ ಮತಾಂತರ ಪ್ರಹಸನ’ ದ್ವಿತೀಯ ಬಹುಮಾನ ಹಾಗೂಕಾಸರಗೋಡಿನ ಸಂತೋಷ್ ಅನಂತಪುರ ಅವರ ‘ಭೂತ ಪಾದ’ ಕಥೆ ತೃತೀಯ ಬಹುಮಾನವನ್ನು ಪಡೆದಿದೆ. ಈ ಬಹುಮಾನಗಳು ಕ್ರಮವಾಗಿ ₹ 12 ಸಾವಿರ ಹಾಗೂ ₹ 10 ಸಾವಿರ ನಗದು ಒಳಗೊಂಡಿವೆ.

ಐದು ಕಥೆಗಳು ಮೆಚ್ಚುಗೆಯ ಬಹುಮಾನಕ್ಕೆ ಆಯ್ಕೆಯಾಗಿವೆ.ಉಡುಪಿಯ ಶ್ರೀಲೋಲ ಸೋಮಯಾಜಿ ಅವರ ‘ಇರ್ಬುಸಾಬಿಯ ಅಷ್ಟಾವಧಾನ ಸೇವೆ’, ಬೆಂಗಳೂರಿನ ಜಯರಾಮಚಾರಿ ಅವರ ‘ಪೊಮ್ಯಾಟೋ’, ಧಾರವಾಡದ ರಾಮಚಂದ್ರ ಎಸ್. ಕುಲಕರ್ಣಿ ಅವರ ‘ಋಣ’ವೆಂಬ ಗೂಢ’, ಚಿತ್ರದುರ್ಗದ ಜಿ.ಎಂ. ಸಂಜಯ್ ಅವರ ‘ಉದ್ಭವ ಸೇತುವೆ’ ಹಾಗೂ ಮೈಸೂರಿನ ಮಾಲತಿ ಹೆಗಡೆ ಅವರ ‘ನೆಲೆ’ ಕಥೆ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾಗಿದೆ. ಈ ಬಹುಮಾನವು ತಲಾ ₹ 2 ಸಾವಿರ ನಗದು ಒಳಗೊಂಡಿವೆ ಎಂದು ‘ಉತ್ಥಾನ’ದ ಪ್ರಧಾನ ಸಂಪಾದಕಎಸ್.ಆರ್. ರಾಮಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.