ADVERTISEMENT

ಪ್ರೇಮಿಗಳ ದಿನ: 273 ಟನ್‌ ಗುಲಾಬಿ ರಫ್ತು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 20:17 IST
Last Updated 14 ಫೆಬ್ರುವರಿ 2021, 20:17 IST

ಬೆಂಗಳೂರು: ಪ್ರೇಮಿಗಳ ದಿನದ ಅವಧಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆಗೆ ಒಟ್ಟು 273 ಟನ್‌ ಗುಲಾಬಿ ಹೂವುಗಳನ್ನು ರಫ್ತು ಮಾಡಲಾಗಿದೆ.

‘ಸಿಂಗಪುರ, ಲಂಡನ್‌, ದುಬೈ, ಕುವೈತ್‌, ಕ್ವಾಲಾಲಂಪುರ, ಆಕ್ಲೆಂಡ್‌, ಮನಿಲಾ ಹಾಗೂ ಇತರೆಡೆಗೆ 170 ಟನ್‌, ಕೋಲ್ಕತ್ತ, ನವದೆಹಲಿ, ಚಂಡೀಗಡ, ಮುಂಬೈ, ಜೈಪುರ, ಅಹಮದಾಬಾದ್‌, ಚೆನ್ನೈ ಸೇರಿದಂತೆ ಇತರ ನಗರಗಳಿಗೆ 103 ಟನ್‌ ಹೂವು ರಫ್ತು ಮಾಡಲಾಗಿದೆ’ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT