ADVERTISEMENT

ಬೆಂಗಳೂರು: ‘ವೇದಾಂತ ಮೇಕಥಾನ್’ ಜ. 28ರಿಂದ ಅನಾವರಣ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 20:19 IST
Last Updated 5 ಜನವರಿ 2026, 20:19 IST
<div class="paragraphs"><p> ಅರಮನೆ ಮೈದಾನ</p></div>

ಅರಮನೆ ಮೈದಾನ

   

ಬೆಂಗಳೂರು: ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ಭಾಗವಾಗಿ ಪರಮ್ ಫೌಂಡೇಷನ್ ಮತ್ತು ವೇದಾಂತ ಭಾರತಿ ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ ‘ವೇದಾಂತ ಮೇಕಥಾನ್’ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ಮೇಕಥಾನ್‌ನಲ್ಲಿ ತಯಾರಾದ ಅತ್ಯುತ್ತಮ ಮಾದರಿಗಳನ್ನು ಜ.28 ರಿಂದ 31ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ (ತ್ರಿಪುರ ವಾಸಿನಿ) ನಡೆಯಲಿರುವ ‘ದಕ್ಷಿಣಾಸ್ಯ ದರ್ಶಿನಿ’ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತದೆ.

ADVERTISEMENT

ವೇದಾಂತ ಮೇಕಥಾನ್ ಪ್ರಶ್ನೆಗಳು ಅನುಭವಗಳಾಗಿ ಬದಲಾಗುವ ವಿಶಿಷ್ಟ ವೇದಿಕೆಯಾಗಿದೆ. ವಿದ್ಯಾರ್ಥಿಗಳು ವೇದಾಂತದ ‘ಮಾಯೆ’, ‘ಚೈತನ್ಯ’ದಂತಹ ದಾರ್ಶನಿಕ ವಿಚಾರಗಳನ್ನು ದೃಷ್ಟಿ ಭ್ರಮೆ ಅಥವಾ ನರವಿಜ್ಞಾನದಂತಹ ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿ, ಸಂವಾದಾತ್ಮಕ ಪ್ರದರ್ಶಿಕೆಗಳನ್ನು ಸಿದ್ಧಪಡಿಸಲಿದ್ದಾರೆ.

ವಿಜ್ಞಾನ, ಎಂಜಿನಿಯರಿಂಗ್ ಮಾತ್ರವಲ್ಲದೆ ವಿನ್ಯಾಸ, ಮನೋವಿಜ್ಞಾನ ಮತ್ತು ಮಾನವಿಕ ವಿಭಾಗದ ವಿದ್ಯಾರ್ಥಿಗಳೂ ಭಾಗವಹಿಸಬಹುದು. ಆಯ್ಕೆಯಾದ ತಂಡಗಳಿಗೆ ವಿಜ್ಞಾನಿಗಳು, ಕಲಾಕಾರರು ಮತ್ತು ವಿದ್ವಾಂಸರು  ಮಾರ್ಗದರ್ಶನ ನೀಡಲಿದ್ದಾರೆ. ತತ್ವಶಾಸ್ತ್ರದ ವಿಚಾರಗಳನ್ನು ಸೆನ್ಸರ್‌ಗಳು, ಕೃತಕ ಬುದ್ದಿಮತ್ತೆ ಮತ್ತು ಎಂಜಿನಿಯರಿಂಗ್ ಬಳಸಿ ಪ್ರದರ್ಶಿಕೆಗಳನ್ನು ಮಾಡಲಾಗುತ್ತಿದೆ. 

ಜ. 15ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು. ಜ.15ರಂದು ವೃತ್ತಿ ತರಬೇತಿ ನಡೆಯಲಿದೆ. ಪ್ರತಿ ತಂಡದಲ್ಲಿ ಐದು ಸದಸ್ಯರು ಇರಲಿದ್ದಾರೆ. ಮಾಹಿತಿಗಾಗಿ vedanta-makeathon@ paraminnovation.org ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.