ಬೆಂಗಳೂರು: ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠದಲ್ಲಿ 2026ರ ಜ.24ರಿಂದ ಮೂರು ದಿನಗಳ ಕಾಲ ವೀರಲೋಕ ಪುಸ್ತಕ ಸಂತೆ ನಡೆಯಲಿದೆ. ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ.
ಭಾಲ್ಕಿಮಠದ ಗುರುಪಟ್ಟದ್ದೇವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಮತ್ತು ಸಂಚಾಲಕ ಗುರುನಾಥ ರಾಜಗೀರ ನೇತೃತ್ವದಲ್ಲಿ ಪುಸ್ತಕ ಸಂತೆ ನಡೆಯಲಿದೆ. 50 ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಮಳಿಗೆಯ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಬೆಂಗಳೂರಿನಿಂದ 100 ಲೇಖಕರನ್ನು ಬೀದರ್‌ನ ಪುಸ್ತಕ ಸಂತೆಗೆ ಆಹ್ವಾನಿಸಲಾಗುತ್ತಿದೆ. ಲೇಖಕರಿಗೆ ಮೂರು ದಿನ ವಸತಿ, ಊಟೋಪಚಾರ, ಬೀದರ್ ಜಿಲ್ಲೆಯ ಐತಿಹಾಸಿಕ ತಾಣಗಳ ಪ್ರವಾಸ ಏರ್ಪಡಿಸಲಾಗಿದೆ.
ಮೇಳದಲ್ಲಿ ಭಾಗಿಯಾಗುವ ಪ್ರಕಾಶಕರಿಗೆ ಆಯೋಜಕರ ವತಿಯಿಂದಲೇ ಮೂರು ದಿನದ ಊಟೋಪಚಾರ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗುತ್ತದೆ. ಆಸಕ್ತ ಲೇಖಕರು ಹಾಗೂ ಪ್ರಕಾಶಕರು ನೋಂದಣಿಗೆ 70221 22121 ಸಂಪರ್ಕಿಸಬಹುದು ಎಂದು ವೀರಲೋಕ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.