
ಯಲಹಂಕ: ಯಲಹಂಕ ಉಪನಗರದಲ್ಲಿರುವ ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಲ್ಲಾ 15 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಾಗಿ ಸಿ.ಆರ್.ಜಯಪ್ಪರೆಡ್ಡಿ, ಎಸ್.ಜಿ.ನರಸಿಂಹಮೂರ್ತಿ, ಎಂ.ಮೋಹನ್‌ಕುಮಾರ್, ರತ್ನಮ್ಮ ಮುನಿರೆಡ್ಡಿ, ರಾಜಣ್ಣ.ಎಚ್, ರಾಜಣ್ಣ.ಟಿ, ಸತೀಶ್.ಕೆ.ವಿ, ಎಸ್.ಎನ್.ಸಂಪತ್‌ಕುಮಾರ್, ಟಿ.ವೆಂಕಟರಾಮರೆಡ್ಡಿ ಆಯ್ಕೆಯಾದರು.
ಹಿಂದುಳಿದ ಪ್ರವರ್ಗ(ಎ) ಸ್ಥಾನಕ್ಕೆ ಕೆ.ಜಿ.ರಾಮಕೃಷ್ಣಯ್ಯ, ಹಿಂದುಳಿದ ಪ್ರವರ್ಗ(ಬಿ)-ಟಿ.ಎನ್.ಶ್ರೀನಿವಾಸ್, ಪರಿಶಿಷ್ಟ ಜಾತಿ ಮೀಸಲು-ನರಸಿಂಹಮೂರ್ತಿ.ಜಿ, ಪರಿಶಿಷ್ಟ ಪಂಗಡ-ಸಿ.ಶ್ರೀನಿವಾಸ್, ಮಹಿಳಾ ಮೀಸಲು-ನೀತಾ.ಎಂ.ಎನ್ ರೆಡ್ಡಿ ಹಾಗೂ ಸುಜಾತ.ಜಿ ಸಂಪಂಗಿರೆಡ್ಡಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರನ್ನು ಶಾಸಕ ಎಸ್.ಆರ್.ವಿಶ್ವನಾಥ್ ಅಭಿನಂದಿಸಿದರು. ವೇಮನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಎಂ.ಮುನಿರೆಡ್ಡಿ, ಬಿಜೆಪಿ ಮುಖಂಡರಾದ ಅಲೋಕ್ ವಿಶ್ವನಾಥ್, ಎಸ್.ಎನ್.ರಾಜಣ್ಣ, ಆವಲಹಳ್ಳಿ ಕೇಶವಮೂರ್ತಿ, ಅದ್ದೆ ವಿಶ್ವನಾಥಪುರ ಮಂಜುನಾಥ್, ಎಸ್.ಜಿ.ಪ್ರಶಾಂತ್‌ರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.