ಪ.ಸ.ಕುಮಾರ್
ಬೆಂಗಳೂರು: ‘ವೆಂಕಟಪ್ಪ ಚಿತ್ರಶಾಲೆಯಲ್ಲಿರುವ ಕೆ. ವೆಂಕಟಪ್ಪ ಹಾಗೂ ಕೆ.ಕೆ. ಹೆಬ್ಬಾರ್ ಅವರ ಕಲಾಕೃತಿಗಳನ್ನು ಸಂರಕ್ಷಿಸುವ ಕೆಲಸ ತ್ವರಿತವಾಗಿ ನಡೆಯಬೇಕು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಅವರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಆಗ್ರಹಿಸಿದ್ದಾರೆ.
‘ವೆಂಕಟಪ್ಪ ಮತ್ತು ಹೆಬ್ಬಾರ್ ಅವರ ಕಲಾಕೃತಿಗಳು ರಾಷ್ಟ್ರದ ಹಾಗೂ ನಾಡಿನ ಕಲಾ ವಲಯದ ಆಸ್ತಿಯಾಗಿದೆ. ಅವರ ಅಪರೂಪದ ಕಲಾಕೃತಿಗಳು ಶಿಲೀಂಧ್ರದಿಂದ ಹಾಳಾಗುತ್ತಿರುವುದು ನೋವನ್ನುಂಟು ಮಾಡಿದೆ. ಗ್ಯಾಲರಿಯಲ್ಲಿರುವ ಕಲಾಕೃತಿಗಳ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗೃತಿ ವಹಿಸಬೇಕು’ ಎಂದು ಹೇಳಿದ್ದಾರೆ.
‘ಕಲಾಕೃತಿಗಳನ್ನು ಸಂಬಂಧಪಟ್ಟವರು ಪ್ರತಿನಿತ್ಯ ಗಮನಿಸುತ್ತಿಲ್ಲವೆ ಎಂಬ ಪ್ರಶ್ನೆ ಎದುರಾಗಿದೆ. ಶಿಲೀಂಧ್ರಕ್ಕೆ ಒಳಗಾಗಿರುವ ಕಲಾಕೃತಿಗಳಲ್ಲದೆ, ಇತರ ಕಲಾಕೃತಿಗಳನ್ನೂ ಸುರಕ್ಷಿತವಾಗಿ ರಕ್ಷಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.