ADVERTISEMENT

ನ.3 ರಿಂದ ವೆಂಕಟಪ್ಪ ಚಿತ್ರಶಾಲೆ ಪ್ರದರ್ಶನಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 14:46 IST
Last Updated 29 ಅಕ್ಟೋಬರ್ 2025, 14:46 IST
 ವೆಂಕಟಪ್ಪ ಚಿತ್ರಶಾಲೆ 
 ವೆಂಕಟಪ್ಪ ಚಿತ್ರಶಾಲೆ    

ಬೆಂಗಳೂರು: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೆಂಕಟಪ್ಪ ಚಿತ್ರಶಾಲೆಯು ನ.3ರಿಂದ ಕಲಾವಿದರು ಮತ್ತು ಸಾರ್ವಜನಿಕರ ಕಲಾ ಪ್ರದರ್ಶನಕ್ಕೆ ಮುಕ್ತವಾಗಲಿದೆ.

ಕಟ್ಟಡ ನವೀಕರಣದ ಕಾರಣ ವೆಂಕಟಪ್ಪ ಚಿತ್ರಶಾಲೆಯಲ್ಲಿ ಕಲಾ ಪ್ರದರ್ಶನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಕಟ್ಟಡವನ್ನು ನವೀಕರಣಗೊಳಿಸಲಾಗಿದೆ. ಈ ಚಿತ್ರಶಾಲೆಯ ಒಂದು ಸುಸಜ್ಜಿತ ಸಭಾಂಗಣ, ಪ್ರತ್ಯೇಕ ಮೂರು ಗ್ಯಾಲರಿಗಳು ಮತ್ತು ಚಿತ್ರಶಾಲೆಯ ಹೊರಾಂಗಣ ಸ್ಥಳಗಳನ್ನು ಬಾಡಿಗೆಗೆ ನೀಡಲಾಗುತ್ತದೆ ಎಂದು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ ಬಗ್ಗೆ ಸಿದ್ಧತೆ ನಡೆಯುತ್ತಿದ್ದು, ಸದ್ಯದಲ್ಲಿಯೇ ಅಂತಿಮಗೊಳ್ಳಲಿದೆ. ಅಲ್ಲಿಯವರೆಗೆ ಆಸಕ್ತ ಕಲಾವಿದರು, ಸಾರ್ವಜನಿಕರು ಹಾಗೂ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳು ವೆಂಕಟಪ್ಪ ಚಿತ್ರಶಾಲೆಗೆ ಭೇಟಿ ನೀಡಿ, ಗ್ಯಾಲರಿಗಳನ್ನು ಕಾಯ್ದಿರಿಸಬಹುದು ಎಂದು ಹೇಳಿದ್ದಾರೆ.

ADVERTISEMENT

ವಿವರಕ್ಕೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎಲ್.ಗೌಡ (ಮೊ.ಸಂಖ್ಯೆ 8105001151), ಕ್ಯೂರೇಟರ್ ಸುಮಿತ್ರ (ಮೊ.ಸಂಖ್ಯೆ 903608358) ಅಥವಾ ಇ ಮೇಲ್ ವಿಳಾಸ asstdirectorgovtmuseum@gmail.com ಮೂಲಕವೂ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.