ADVERTISEMENT

ನಟಿಯ ಅಶ್ಲೀಲ ವಿಡಿಯೊ ಹರಿಯಬಿಡುವ ಬೆದರಿಕೆ

₹ 30 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ನಟಿಯ ಮೇಕಪ್‌ ಮ್ಯಾನ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 15:33 IST
Last Updated 25 ಅಕ್ಟೋಬರ್ 2022, 15:33 IST
ಬಸವರಾಜು
ಬಸವರಾಜು   

ಬೆಂಗಳೂರು: ನಟಿಯ ಅಶ್ಲೀಲ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಮಾನಹಾನಿ ಮಾಡುತ್ತೇನೆ ಎಂದು ಬೆದರಿಸಿ, ₹ 30 ಲಕ್ಷ ಬೇಡಿಕೆಯಿಟ್ಟಿದ್ದ ನಟಿಯ ಮೇಕಪ್‌ ಮ್ಯಾನ್‌ ಮಹಾಂತೇಶ್‌ (37) ಎಂಬಾತನನ್ನು ಈಶಾನ್ಯ ವಿಭಾಗದ ಸೆನ್‌ ಪೊಲೀಸರು ಬಂಧಿಸಿದ್ದಾರೆ.

‘ನಗ್ನ ಹಾಗೂ ಅರೆನಗ್ನ ಚಿತ್ರಗಳು ನನ್ನ ಬಳಿಯಿವೆ ಎಂದು ನಟಿಗೆ ವಾಟ್ಸ್‌ಆ್ಯಪ್‌ ಮೂಲಕ ಆರೋಪಿ ಸಂದೇಶ ಕಳುಹಿಸಿದ್ದ. ನನಗೆ ಬೇಡಿಕೆಯಷ್ಟು ಹಣ ನೀಡಬೇಕು. ಇಲ್ಲದಿದ್ದರೆ ಈ ಚಿತ್ರಗಳು ಹಾಗೂ ವಿಡಿಯೊಗಳನ್ನು ಹರಿಯಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಆರಂಭದಲ್ಲಿ ನಟಿ ಅದನ್ನು ನಂಬದೇ ನಿರ್ಲಕ್ಷ್ಯ ವಹಿಸಿದ್ದರು. ಅದಾದ ಕೆಲವೇ ದಿನಗಳ ಬಳಿಕ ಕೆಲವು ಅಶ್ಲೀಲ ವಿಡಿಯೊಗಳನ್ನು ಆರೋಪಿಯು ಅನಾಮಧೇಯ ನಂಬರ್‌ನಿಂದ ಕಳುಹಿಸಿದ್ದ. ಇದರಿಂದ ಹೆದರಿದ ನಟಿ ದೂರು ನೀಡಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಆರೋಪಿಯು ಭುವನೇಶ್ವರಿ ನಗರದಲ್ಲಿ ನೆಲೆಸಿದ್ದ. ಇದೇ ರೀತಿ ಇನ್ನೂ ಕೆಲವು ಮಹಿಳೆಯರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಈಕೆ ಕೆಲವು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದರು. ಲೈವ್‌ ಸ್ಟ್ರೀಮಿಂಗ್‌ ಆ್ಯಪ್‌ಗಳಲ್ಲಿ ಖಾತೆ ತೆರೆದು ಅರೆನಗ್ನ ವಿಡಿಯೊ ಹಂಚಿಕೊಂಡಿದ್ದರು. ಆ್ಯಪ್‌ಗಳಲ್ಲಿ ಹೆಚ್ಚು ಲೈಕ್‌ ಬಂದರೆ ಹಣ ಸಿಗಲಿದೆ ಎಂಬ ಕಾರಣಕ್ಕೆ ನಟಿ ಇಂತಹ ವಿಡಿಯೊಗಳನ್ನು ಹಾಕಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋ‍‍ಪಿ ಅದೇ ವಿಡಿಯೊ ಕಳುಹಿಸಿ ಬೆದರಿಸಿದ್ದ. ಹಣಕ್ಕೆ ಬೇಡಿಕೆಯಿಟ್ಟಿದ್ದ’

‘ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ನಟಿ ಸಂಬಂಧಿಯೂ ಹೌದು. ಇದೇ ಸಲುಗೆಯಿಂದ ಕೃತ್ಯ ನಡೆಸಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.