ADVERTISEMENT

ಮಗನ ಕಟ್ಟಿಹಾಕಿದ ತಾಯಿ; ಹರಿದಾಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 19:24 IST
Last Updated 11 ಫೆಬ್ರುವರಿ 2019, 19:24 IST
ವಿಡಿಯೊದಲ್ಲಿದ್ದ ಬಾಲಕ
ವಿಡಿಯೊದಲ್ಲಿದ್ದ ಬಾಲಕ   

ಬೆಂಗಳೂರು: ವಿಪರೀತವಾಗಿ ಕಾಡುತ್ತಿದ್ದನೆಂಬ ಕಾರಣಕ್ಕೆ ಮಗನನ್ನು ತಾಯಿಯೊಬ್ಬರು ಹಗ್ಗದಿಂದ ಕಟ್ಟಿಹಾಕಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ಹರಿದಾಡಿತು.

ನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಡಿಯೊವನ್ನು ಕೆಲವರು ನಗರ ಪೊಲೀಸರ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.

ಬಾಲಕನ ಎರಡು ಕೈಗಳನ್ನು ಹಗ್ಗದಿಂದ ಬಿಗಿದು, ಮನೆಯ ಕಿಟಕಿಯ ಸರಳುಗಳಿಗೆ ಕಟ್ಟಿ ಹಾಕಲಾಗಿದೆ. ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ದಾರಿಹೋಕರು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ಬಾಲಕನಿರುವ ಜಾಗ ಗೊತ್ತಾಗಿಲ್ಲ.

ADVERTISEMENT

‘ವಿಡಿಯೊ ಬೆಂಗಳೂರಿನದ್ದು ಅಥವಾ ಬೇರೆ ಕಡೆಯದ್ದು ಎಂಬುದು ಗೊತ್ತಾಗುತ್ತಿಲ್ಲ. ವಿಡಿಯೊ ಅಪ್‌ಲೋಡ್‌ ಮಾಡಿರುವವರನ್ನು ವಿಚಾರಿಸಿದರೆ ‘ಫಾರ್ವರ್ಡ್‌ ವಿಡಿಯೊ’ ಎನ್ನುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.