ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ: ರಸ್ತೆ ವಿಭಜಕ ತೆರವುಗೊಳಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:30 IST
Last Updated 15 ಸೆಪ್ಟೆಂಬರ್ 2025, 4:30 IST
<div class="paragraphs"><p>ರಸ್ತೆಯ ಮಧ್ಯದಲ್ಲಿರುವ ವಿಭಜಕ</p></div>

ರಸ್ತೆಯ ಮಧ್ಯದಲ್ಲಿರುವ ವಿಭಜಕ

   

ನಂಜಪ್ಪ ವೃತ್ತದಿಂದ ತಿಂಡ್ಲುಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿಭಜಕವಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಾತ್ರಿ ಹೊತ್ತಿನಲ್ಲಿ ಸಂಚರಿಸುವ ವಾಹನ ಸವಾರರಿಗೆ ಈ ವಿಭಜಕ ಗೋಚರಿಸುವುದಿಲ್ಲ. ಇದರಿಂದ ಹಲವಾರು ಅಪಘಾತಗಳು ಸಂಭವಿಸಿದ್ದು, ಅನೇಕರು ಗಾಯಗಳನ್ನು ಮಾಡಿಕೊಂಡಿದ್ದಾರೆ. ಈ ರಸ್ತೆಯಲ್ಲಿ ವಿಭಜಕ ಅಳವಡಿಸಿರುವುದು ಸರಿಯಾಗಿಲ್ಲ. ವಿಭಜಕ ಗೋಚರವಾಗುವಂತೆ ಕ್ರಮ ಕೈಗೊಳ್ಳಬೇಕು. 

-ಜೋಶಿ ಪೌಲ್, ತಿಂಡ್ಲು 

ADVERTISEMENT

****

ರಸ್ತೆ ಅಗೆದುಹಾಕಲಾಗಿದೆ

‘ಅಗೆದ ರಸ್ತೆ ಸರಿಪಡಿಸಿ’  

ಎಚ್‌ಎಸ್‌ಆರ್‌ ಲೇಔಟ್‌ನ ಆರನೇ ಸೆಕ್ಟರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅನನುಕೂಲವಾಗಿದೆ. ರಸ್ತೆಯನ್ನು ಅಗೆದು ಮಣ್ಣಿನ ರಾಶಿಯನ್ನು ಅಲ್ಲಲ್ಲಿ ಹಾಕಿದ್ದು, ನಿತ್ಯ ದೂಳಿನ ಮಜ್ಜನವಾಗುತ್ತಿದೆ. ಇದರಿಂದ ಸ್ಥಳೀಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಬೆಂಗಳೂರು ಜಲಮಂಡಳಿಯ ಸಿಬ್ಬಂದಿ ಕೊಳವೆ ಜೋಡಿಸಲು ಅಗೆದಿರುವ ರಸ್ತೆಯನ್ನು ಕೂಡಲೇ ಮುಚ್ಚಿ, ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. 

-ಎಚ್. ವಿ. ಶ್ರೀಧರ್, ಎಚ್‌ಎಸ್‌ಆರ್‌ ಲೇಔಟ್

****

‘ರಸ್ತೆ ದುರಸ್ತಿಗೆ ಆಗ್ರಹ’

ಎಂಎಲ್‌ಎ ಲೇಔಟ್‌ನಿಂದ ಕಮ್ಮನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಮಯವಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ಇದೇ ರಸ್ತೆ ಪ್ರೀನ್ಸ್‌ ಆ್ಯಂಡ್‌ ಪ್ರಿನ್ಸೆಸ್‌ ಅಪಾರ್ಟ್‌ಮೆಂಟ್‌ ಬಳಿ ರಾಜ ಕಾಲುವೆಯ ಹತ್ತಿರ ತುಂಬಾ ಕಿರಿದಾಗಿದೆ. ಮಳೆ ಬಂದರೆ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಇದರಿಂದ ಸ್ಥಳೀಯ ನಿವಾಸಿಗಳ ಓಡಾಟಕ್ಕೂ ಸಮಸ್ಯೆ ಆಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. 

-ನಂದೀಶ್ ಬಿ., ಎಂಎಲ್ಎ ಲೇಔಟ್

ಬೆಂಗಳೂರು ಜನದನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.