ADVERTISEMENT

ತ್ಯಾಜ್ಯ ವಿಲೇವಾರಿ: ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್‌’ಗೆ ವಿರೋಧ

ಸ್ಥಳ ಹುಡುಕಾಟದಲ್ಲಿ ಬಿಬಿಎಂಪಿ l 3 ವರ್ಷದಿಂದ ಕಾರ್ಯಗತಕ್ಕೆ ಕಂಟಕ

Published 29 ಜನವರಿ 2023, 19:48 IST
Last Updated 29 ಜನವರಿ 2023, 19:48 IST
ಶೆಟ್ಟಿಹಳ್ಳಿಯಲ್ಲಿರುವ ‘ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್‌’
ಶೆಟ್ಟಿಹಳ್ಳಿಯಲ್ಲಿರುವ ‘ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್‌’   

ಬೆಂಗಳೂರು: ರಸ್ತೆ, ತೆರೆದ ಪ್ರದೇಶದಲ್ಲಿ ಕಸ ವರ್ಗಾವಣೆ, ದ್ರವ ತ್ಯಾಜ್ಯದ ಸಮಸ್ಯೆ, ಬೀದಿ ಪ್ರಾಣಿಗಳಿಂದ ಎರೆಚಾಟ,
ಕಾಂಪ್ಯಾಕ್ಟರ್‌ಗಳ ಓಡಾಟ ಕಡಿಮೆಗೊಳಿಸುವ ‘ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್‌’ (ಎಂಟಿಎಸ್‌) ಸ್ಥಾಪನೆಗೆ ನಾಗರಿಕರ ವಿರೋಧ ವ್ಯಕ್ತವಾಗಿದೆ. ಹೀಗಾಗಿ, ಮೂರು ವರ್ಷವಾದರೂ 9 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಎಂಟಿಎಸ್‌ ಅನ್ನು 30x40 ಅಡಿ ಅಳತೆಯ ಸುಮಾರು ಒಂದು ಸಾವಿರ ಚದರ ಅಡಿ ಸ್ಥಳದಲ್ಲಿ ಸ್ಥಾಪಿಸಬಹುದು. ಟ್ರಕ್ಟ್‌
ಕೊಂಡೊಯ್ಯಬಹುದಾದ →ಪೋರ್ಟಬಲ್‌ ಕಾಂಪ್ಯಾಕ್ಟರ್‌, ಹುಕ್‌ ಲೋಡರ್ ಇರುತ್ತವೆ. ತಲಾಒಬ್ಬ ಆಪರೇಟರ್‌, ಚಾಲಕ, ಸಹಾಯಕ, ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ಐವರು ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

‘ವಾರ್ಡ್‌ಗಳಲ್ಲಿ ಆಟೊ, ಟಿಪ್ಪರ್ ಹಾಗೂ ಕೈಗಾಡಿಗಳಿಂದ ಹಸಿ ಕಸ ನೇರವಾಗಿ ಕಾಂಪ್ಯಾಕ್ಟರ್‌ಗಳಿಗೆ ರಸ್ತೆ ಅಥವಾ ಕೆಲವು ತೆರೆದ ಪ್ರದೇಶಗಳಲ್ಲಿ ವರ್ಗಾವಣೆ ಆಗುತ್ತಿದೆ. ಈ ಜಾಗದಲ್ಲಿ ದ್ರವ ತ್ಯಾಜ್ಯ, ತ್ಯಾಜ್ಯ ಚೆಲ್ಲಿರುವ ಪ್ರಕರಣಗಳದ್ದೇ ಸಮಸ್ಯೆ. ಇದನ್ನು ಎಂಟಿಎಸ್‌ ನಿವಾರಿಸಲಿದೆ. ಆಟೊ, ಟಿಪ್ಪರ್‌ಗಳಿಂದ ಬರುವ ಕಸ ಎಂಟಿಎಸ್‌ ಕೇಂದ್ರದಲ್ಲಿರುವ ಪೋರ್ಟಬಲ್‌ ಕಾಂಪ್ಯಾಕ್ಟರ್‌ಗೆ ವರ್ಗಾವಣೆಯಾಗುತ್ತದೆ. ಅಲ್ಲಿ, ತ್ಯಾಜ್ಯವನ್ನು ಕಾಂಪ್ಯಾಕ್ಟ್‌ ಮಾಡುವ ಜೊತೆಗೆ ದ್ರವ ತ್ಯಾಜ್ಯವನ್ನು ಹೊರಹಾಕ
ಲಾಗುತ್ತದೆ. ಅಲ್ಲಿಂದ ಸಂಸ್ಕರಣೆಗೆ ಘಟಕಕ್ಕೆ ಟ್ರಕ್‌ಗಳಲ್ಲಿ ತೆರಳುತ್ತದೆ’ ಎಂದುಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾ
ಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಂತೋಷ್‌ ವಿವರ ನೀಡಿದರು.

ADVERTISEMENT

‘ದಿನದ ಎಲ್ಲ ಸಮಯವೂ ಕಾರ್ಯನಿರ್ವಹಿಸುವ ಎಂಟಿಎಸ್‌ಗಳನ್ನು ಒಂದೇ ರೀತಿಯಲ್ಲಿ ಸ್ಥಾಪಿಸಲಾಗುತ್ತದೆ.ಇದರ ನೀಲನಕ್ಷೆ ಇದೆ. ಯಾವುದೇ ರೀತಿಯ ಸಮಸ್ಯೆ ಸುತ್ತಮುತ್ತಲಿನವರಿಗೆ ಉಂಟಾಗುವುದಿಲ್ಲ’ ಎಂದು ಎಂಜಿನಿಯರ್‌ ಮಹದೇವ್‌ ತಿಳಿಸಿದರು.

ರಾಜ್ಯ ಸರ್ಕಾರದ ನಗರೋತ್ಥಾನ ಅನುದಾನದಲ್ಲಿ ಪ್ರಥಮ ಬಾರಿಗೆ ₹136.06 ಕೋಟಿಯಲ್ಲಿ 50 ಎಂಟಿಎಸ್‌
ಗಳು ಸ್ಥಾಪನೆಯಾಗಲಿವೆ. ಏಳು ವರ್ಷ ಇವುಗಳ ನಿರ್ವಹಣೆಗೆ ಒಟ್ಟಾರೆ ₹256.73 ಕೋಟಿ ವೆಚ್ಚವಾಗಲಿದೆ.

ಬಿಬಿಎಂಪಿ ಹೊರಭಾಗದಲ್ಲಿ 9 ಎಂಟಿಎಸ್‌ ಪ್ರಾರಂಭವಾಗಿವೆ. ಕೆಲವು ಮೇಲ್ಸೇತುವೆ ಕೆಳಗೆ ಸ್ಥಾಪಿಸಲಾಗುತ್ತಿದೆ.
ಆದರೂ 50 ಎಂಟಿಎಸ್‌ ಸ್ಥಾಪನೆಯಾಗುವ ಸ್ಥಳದಲ್ಲಿ ಇದೀಗ 44ಕ್ಕೆ ಮಾತ್ರ ಚಾಲನೆ ಸಿಕ್ಕಿದೆ. ಇದರಲ್ಲಿ 16 ಪ್ರದೇಶ
ಗಳಲ್ಲಿ ಸ್ಥಳೀಯರು ವಿರೋಧಿಸಿದ್ದಾರೆ. ಹೀಗಾಗಿ, ಯೋಜನೆ ಕುಂಟುತ್ತಿದೆ.

ಎಲ್ಲರೂ ಕಸ ನಮ್ಮಲ್ಲಿ ವರ್ಗಾವಣೆ, ವಿಂಗಡಣೆ ಬೇಡ ಎಂದರೆ ಆ ಕಾರ್ಯವನ್ನು ಎಲ್ಲಿ ಮಾಡು
ವುದು? ಆಯಾ ವಾರ್ಡ್‌ನ ತ್ಯಾಜ್ಯ ಅಲ್ಲಿಯೇ ಸಂಸ್ಕರಣೆಯಾಬೇಕೆಂಬ ಯೋಜನೆಯೂ ಇದೆ. ಆದರೆ, ಹಲವೆಡೆ ಎಂಟಿಎಸ್‌ಗೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಯೋಜನೆ ವಿಳಂಬವಾಗುತ್ತಿದೆ’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‌ ಕುಮಾರ್‌ ಅವರು ಹೇಳಿದರು.

***

‘ಎಲ್ಲರೂ ಕಸ ನಮ್ಮಲ್ಲಿ ವರ್ಗಾವಣೆ, ವಿಂಗಡಣೆ ಬೇಡ ಎಂದರೆ ಆ ಕಾರ್ಯವನ್ನು ಎಲ್ಲಿ ಮಾಡುವುದು? ಆಯಾ ವಾರ್ಡ್‌ನ ತ್ಯಾಜ್ಯ ಅಲ್ಲಿಯೇ ಸಂಸ್ಕರಣೆಯಾಬೇಕೆಂಬ ಯೋಜನೆಯೂ ಇದೆ. ಆದರೆ, ಹಲವೆಡೆ ಎಂಟಿಎಸ್‌ಗೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಯೋಜನೆ ವಿಳಂಬವಾಗುತ್ತಿದೆ’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‌ ಕುಮಾರ್‌ ಅವರು ಹೇಳಿದರು.

‘ಎಲ್ಲೆಲ್ಲಿ ಸ್ಥಳಾವಕಾಶವಿದೆಯೋ ಅಲ್ಲೆಲ್ಲ ಎಂಟಿಎಸ್‌ ಆರಂಭಿಸುತ್ತಿದ್ದೇವೆ. ಎಂಟಿಎಸ್‌ ಸ್ಥಾಪನೆಯಿಂದ ಕಾಂಪ್ಯಾಕ್ಟರ್‌ಗಳ ಸಂಚಾರ
ಕಡಿಮೆಯಾಗುತ್ತದೆ. ಅವಕಾಶ ನೀಡಬೇಕು’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಪರಶುರಾಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.