ಬೆಂಗಳೂರು: ತೃತೀಯ ಹಂತದ ತ್ಯಾಜ್ಯನೀರು ಶುದ್ಧೀಕರಣ ಘಟಕಗಳಲ್ಲಿ (ಎಸ್‌ಟಿಪಿ) ಸಂಸ್ಕರಿಸಿದ ನೀರನ್ನು ಟ್ಯಾಂಕರ್‌ಗಳ ಮೂಲಕ ಮಾರಾಟ ಮಾಡಲು ಜಲಮಂಡಳಿ ಮುಂದಾಗಿದೆ.
ನಗರದ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಸ್ಕರಿಸಿದ ನೀರಿಗೆ ದರ ನಿಗದಿಪಡಿಸಿ, ಎಸ್‌ಟಿಪಿಯ ಸುತ್ತಮುತ್ತಲಿನ ಪ್ರದೇಶಕ್ಕೆ ನೀರನ್ನು ಪೂರೈಕೆ ಮಾಡಲಾಗುತ್ತದೆ.ಸಂಸ್ಕರಿಸಿದ ಈ ನೀರನ್ನು ಕುಡಿಯಲು ಹೊರತುಪಡಿಸಿ ಇತರೆ ಬಳಕೆಗೆ ಉಪಯೋಗಿಸಬಹುದು. ಪ್ರತಿ 6 ಸಾವಿರ ಲೀಟರ್‌ನ ಟ್ಯಾಂಕರ್ ಲೋಡ್‌ಗೆ ಜಲಮಂಡಳಿ ₹360 ನಿಗದಿಪಡಿಸಿದೆ.
ಸಾರ್ವಜನಿಕರು ಲಾರಿಯಿಂದಲೂ ನಿರ್ದಿಷ್ಟ ಎಸ್‌ಟಿಪಿಯಿಂದ ನೀರನ್ನು ಖರೀದಿಸಲು ಅವಕಾಶವಿದ್ದು, ಸಾವಿರ ಲೀಟರ್ ನೀರಿಗೆ ₹15 ಪಾವತಿಸಬೇಕು. ಅದೇ ರೀತಿ, ಗ್ರಾಹಕರು ಘಟಕದಿಂದ ಕೊಳವೆಯನ್ನು ಅಳವಡಿಸಿಕೊಂಡು ಸಹ ನೀರನ್ನು ಪಡೆದುಕೊಳ್ಳಬಹುದು. ಹೀಗೆ ನೀರನ್ನು ಪಡೆದಲ್ಲಿ ಸಾವಿರ ಲೀಟರ್ ನೀರಿಗೆ ₹25 ನೀಡಬೇಕು.
ಕಬ್ಬನ್ ಉದ್ಯಾನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಕೇಂದ್ರ ವಾಣಿಜ್ಯ ಪ್ರದೇಶದ ಯುಬಿ ಸಿಟಿ, ಎಂ.ಜಿ ರಸ್ತೆ,ಹಲಸೂರು, ರಿಚ್‌ಮಂಡ್ ಟೌನ್, ಶಾಂತಿ ನಗರ, ಹಳೆ ವಿಮಾನ ನಿಲ್ದಾಣ ರಸ್ತೆ, ದೊಮ್ಮಲೂರು ಸುತ್ತಮುತ್ತಲ ಪ್ರದೇಶದವರು ಈ ನೀರನ್ನು ಪಡೆಯಬಹುದು.
ಲಾಲ್‌ಬಾಗ್ ಘಟಕದಿಂದ ಜಯನಗರ, ಬಸವನಗುಡಿ ಸುತ್ತಮುತ್ತಲಿನ ಪ್ರದೇಶಕ್ಕೆ ಸಂಸ್ಕರಿಸಿದ ನೀರು ಪೂರೈಕೆ ಮಾಡಲಾಗುತ್ತದೆ.
ನಾಯಂಡಹಳ್ಳಿಯ ವೃಷಭಾವತಿ ಕಣಿವೆ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಮೈಸೂರು ರಸ್ತೆ,ವಿಜಯನಗರ, ಗ್ಲೋಬಲ್ ವಿಲೇಜ್ ಟೆಕ್‌ಪಾರ್ಕ್,ರಾಜರಾಜೇಶ್ವರಿ ನಗರ, ನಾಗರಬಾವಿ ಸುತ್ತಮುತ್ತಲ ಪ್ರದೇಶಕ್ಕೆ ನೀರನ್ನು ಮಾರಾಟ ಮಾಡಲಾಗುತ್ತದೆ. ಯಲಹಂಕದ ಘಟಕದಿಂದ ಯಲಹಂಕ, ಬ್ಯಾಟರಾಯನಪುರ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಹಾಗೂ ಜಿಕೆವಿಕೆ ಸುತ್ತಮುತ್ತಲಿನ ಪ್ರದೇಶಕ್ಕೆ ಸಂಸ್ಕರಿಸಿದ ನೀರನ್ನು ನೀಡಲಾಗುತ್ತದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.
ಸಂಸ್ಕರಿಸಿದ ನೀರಿನ ದರ
* ₹360 ಒಂದು ಟ್ಯಾಂಕರ್‌ಗೆ
* ₹15 ಲಾರಿ ಮೂಲಕ ಪಡೆದರೆ (ಸಾವಿರ ಲೀಟರ್‌ಗೆ)
* ₹25 ಕೊಳವೆ ಅಳವಡಿಸಿಕೊಂಡು ಪಡೆದರೆ (ಸಾವಿರ ಲೀಟರ್‌ಗೆ)
ವಿವರಕ್ಕೆ ಕರೆ ಮಾಡಿ
* ಕಬ್ಬನ್ ಪಾರ್ಕ್ ಎಸ್‌ಟಿಪಿ–9886619737
* ಲಾಲ್‌ಬಾಗ್ ಎಸ್‌ಟಿಪಿ–9886619737
* ನಾಯಂಡಹಳ್ಳಿ ಎಸ್‌ಟಿಪಿ–9940061797
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.