ADVERTISEMENT

ವೆಬ್‌ಸೈಟ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 21:52 IST
Last Updated 15 ಫೆಬ್ರುವರಿ 2021, 21:52 IST

ಬೆಂಗಳೂರು: ಛಾಯಾಚಿತ್ರಗಳು ಮತ್ತು ಅದಕ್ಕೆ ಸಂಬಂಧಿತ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಪಿಕ್ಸ್‌ಫಾರ್‌ಕಾಸ್‌ ವೆಲ್‌ಫೇರ್ ಅಸೋಸಿಯೇಷನ್‌ ವತಿಯಿಂದ ವೆಬ್‌ಸೈಟ್‌ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಗಗನ್ ನಾರಂಗ್, ವಿಜಯ್ ಕುಮಾರ್ ಗೋಗಿ, ಸುನೀಲ್ ಲಿಮಾಯೆ ಹಾಗೂ ಇತರರು ಭಾಗವಹಿಸಿದ್ದರು.

‘ಸಂಘದ ವೆಬ್‌ಸೈಟ್ https://www.pix4cause.com ಮುಖೇನ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ಪ್ರಕೃತಿ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿ ಮತ್ತು ಕುಟುಂಬಗಳ ಕಲ್ಯಾಣದ ದೃಷ್ಟಿಯಿಂದ ದತ್ತಿ ಚಟುವಟಿಕೆಗಳಿಗೆ ಬಳಸಲಾಗುವುದು. ವನ್ಯಜೀವಿ ಛಾಯಾಗ್ರಾಹಕ ಮೋಹನ್ ಥಾಮಸ್ ಇದರ ನೇತೃತ್ವ ವಹಿಸಿದ್ದಾರೆ’ ಎಂದು ಪ್ರಕಟಣೆತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.