ADVERTISEMENT

‘ಪ್ರಶ್ನೋತ್ತರ ಅವಧಿಯೇ ಬೇಡವೆಂದರೆ, ಅಧಿವೇಶನ ಕರೆಯುವುದಾದರೂ ಯಾಕೆ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 20:00 IST
Last Updated 5 ಸೆಪ್ಟೆಂಬರ್ 2020, 20:00 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ‘ಸಂಸತ್ತಿನ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯೇ ಬೇಡವೆಂದರೆ, ಅಧಿವೇಶನ ಕರೆಯುವುದಾದರೂ ಯಾಕೆ’ ಎಂದು ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ಪ್ರಕಟಗೊಂಡ ‘ಪ್ರಶ್ನೋತ್ತರ ಅವಧಿ ರದ್ದು ನಿರ್ಧಾರ ವಾಪಸ್‌ಗೆ ಆಗ್ರಹ’ ಸುದ್ದಿಯನ್ನು ಟ್ಯಾಗ್‌ ಮಾಡಿರುವ ಅವರು, ‘ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಾಗದಷ್ಟು ಅಂಜುಬುರಕತನವೇ ಮೋದಿ ಸರ್ಕಾರಕ್ಕೆ’ ಎಂದೂ ಕೇಳಿದ್ದಾರೆ.

‘ಬಿಜೆಪಿ ನಾಯಕರೇ, ಸರ್ವಾಧಿಕಾರಿ ಧೋರಣೆಯ ಬಗ್ಗೆ ಇದಕ್ಕಿಂತ ಉದಾಹರಣೆ ಬೇಕೆ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.