ADVERTISEMENT

ವ್ಹೀಲಿಂಗ್ ವಿರುದ್ಧ ಕಾರ್ಯಾಚರಣೆ; 12 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 19:37 IST
Last Updated 30 ಆಗಸ್ಟ್ 2020, 19:37 IST
   

ಬೆಂಗಳೂರು: ವ್ಹೀಲಿಂಗ್ ವಿರುದ್ಧ ಕಾರ್ಯಾಚರಣೆ ನಡೆಸಿರುವ ಕೆ.ಆರ್.ಪುರ, ಹೆಬ್ಬಾಳ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು, 12 ಆರೋಪಿಗಳನ್ನು ಬಂಧಿಸಿದ್ದಾರೆ. 15 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಆಂಧ್ರ ಕಾಲೋನಿಯ ಕಾರ್ತಿಕ್ (21), ಮಾರತ್ತಹಳ್ಳಿಯ ಕೃಷ್ಣ (19), ಹೊಸಕೋಟೆಯ ಗೌತಮ್ (21), ಪ್ರದೀಪ್ (20), ಮತ್ತಿಕೆರೆಯ ಸಮೀರ್‌ (22), ಬಂಡೇಪಾಳ್ಯದ ಪ್ರಜ್ಞೇಶ್ (25), ಸೈಯ್ಯದ್ (20), ಸುಂದರ್‌ರಾಜ್ (19), ಗಾರೆಬಾವಿಪಾಳ್ಯದ ಸಂತೋಷ್ ಕುಮಾರ್ (20), ಹೆಬ್ಬಗೋಡಿಯ ಹೇಮಂತ್ ಕುಮಾರ್ (19), ಚನ್ನಪಟ್ಟಣದ ರುಹೀದ್ ಅಹಮದ್ (20) ಹಾಗೂ ತಮಿಳುನಾಡಿನ ಅಕ್ಬರ್ ಗುಲಾಬ್ (20) ಬಂಧಿತರು.

‘ಮೆಕ್ಯಾನಿಕ್ ಆಗಿದ್ದ ಸಮೀರ್, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಾಯಕಾರಿಯಾಗಿ ಬೈಕ್ ವ್ಹೀಲಿಂಗ್ ಮಾಡಿದ್ದ. ಅದರ ಫೋಟೊವನ್ನು ಇನ್‌ಸ್ಟಾಗ್ರಾಮ್‌ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ’ ಎಂದು ಹೆಬ್ಬಾಳ ಪೊಲೀಸರು ಹೇಳಿದರು.

ADVERTISEMENT

‘ಕೆಲ ಆರೋಪಿಗಳು, ಡೆಲಿವರಿ ಬಾಯ್‌ಗಳಾಗಿದ್ದರು. ಶೋಕಿಗಾಗಿ ವ್ಹೀಲಿಂಗ್‌ನಲ್ಲಿ ತೊಡಗಿದ್ದರು. ಅವರನ್ನು ಬಂಧಿಸಿ, ಚಾಲನಾ ಪರವಾನಗಿ ಪತ್ರವನ್ನು ಜಪ್ತಿ ಮಾಡಲಾಗಿದೆ’ ಎಂದು ಕೆ.ಆರ್‌.ಪುರ ಸಂಚಾರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.