ADVERTISEMENT

ಅಂಬಿ ಅಂತ್ಯಕ್ರಿಯೆಗೆ ಬಾರದ ಮಂಡ್ಯದ ಹುಡುಗಿ: ರಮ್ಯಾ ಕಾಲಿಗೆ ಏನಾಯ್ತು?

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 9:22 IST
Last Updated 27 ನವೆಂಬರ್ 2018, 9:22 IST
ಸುಮಲತಾ, ಅಂಬರೀಷ್‌ ಜೊತೆ ರಮ್ಯಾ
ಸುಮಲತಾ, ಅಂಬರೀಷ್‌ ಜೊತೆ ರಮ್ಯಾ   

ಬೆಂಗಳೂರು: ಅಂಬರೀಷ್‌ ಅವರ ಅಂತ್ಯಸಂಸ್ಕಾರದಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲೆಡೆ ಇರುವ ಅವರ ಗೆಳಯರ ಬಳಗವೇ ಹಾಜರಿತ್ತು.ಆದರೆ, ರಮ್ಯಾ ಮಾತ್ರ ಅಲ್ಲಿ ಕಾಣಿಸಲಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಗಳು ಈ ಮೂಡಿವೆ.

ರಾಜಕೀಯವಾಗಿ ಬೆಂಬಲವಾಗಿ ನಿಂತ ಅಂಬರೀಷ್‌ ಅವರಿಗೆ ಅಂತಿಮ ನಮನ ಸಲ್ಲಿಸಲು ರಮ್ಯಾ ಬಾರದಿದ್ದದ್ದು, ಅಂಬರೀಷ್‌ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸ್ವೀಡನ್‌ನಲ್ಲಿ ಚಿತ್ರೀಕರಣದಲ್ಲಿದ್ದ ದರ್ಶನ್‌ ಸಹ ವಿಷಯ ತಿಳಿದ ತಕ್ಷಣ ಹೊರಟು ಬಂದಿದ್ದಾರೆ. ಸಾವಿನ ಸುದ್ದಿ ತಿಳಿದು ಟ್ವೀಟ್‌ ಮಾಡಿರುವ ರಮ್ಯಾ ಅಂತ್ಯಸಂಸ್ಕಾರಕ್ಕೆ ಏಕೆಬರಲಿಲ್ಲ ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ.

ಅದಕ್ಕೆ ಕಾರಣ ರಮ್ಯಾ ಅವರ ಅನಾರೋಗ್ಯ. ಅವರ ಕಾಲಿಗೆ ಸಮಸ್ಯೆಯಾಗಿರುವುದರಿಂದ ಬರುವುದಕ್ಕೆ ಆಗಿಲ್ಲ ಎನ್ನುವುದನ್ನು ಅವರ ಆಪ್ತ ಬಳಗ ಹೇಳುತ್ತಿದೆ. ರಮ್ಯಾ ಅವರೇಕಾಲಿಗೆ ಬ್ಯಾಂಡೆಜ್‌ ಹಾಕಿರುವ ಫೋಟೊವನ್ನು ಅಕ್ಟೋಬರ್‌ 19ರಂದುಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.ಇಷ್ಟಕ್ಕೂ ಅವರ ಕಾಲಿಗೆ ಏನಾಗಿದೆ?

ADVERTISEMENT

ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ರಮ್ಯಾಹೇಳಿಕೊಂಡಿದ್ದಾರೆ. ‘ಈಗ ನನ್ನ ಕಾಲು ಗೆಡ್ಡೆ ಮತ್ತು ಕ್ಯಾನ್ಸರ್​ ಮುಕ್ತವಾಗಿದೆ. ಆದರೆ, ಕೆಲವು ದಿನಗಳವರೆಗೆ ನಾನು ವಿಶ್ರಾಂತಿಯಲ್ಲಿ ಇರಬೇಕಿದೆ. ಮತ್ತೆ ದೈಹಿಕ ಪರೀಕ್ಷೆಗೆ ಒಳಗಾಗಬೇಕಿದೆ. ದೇಹದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೇ ಅದನ್ನು ನಿರ್ಲಕ್ಷ್ಯಿಸಬೇಡಿ, ಕೂಡಲೇ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ. ನಿಮ್ಮ ದೇಹ ನೀಡುವ ಸೂಚನೆಗಳಿಗೆ ಗಮನಕೊಡಿ’ ಎಂದು ಸಲಹೆ ನೀಡಿದ್ದಾರೆ.

ಪಾದದ ಸ್ನಾಯುವಿನ ಕೋಶದಲ್ಲಿಗಡ್ಡೆಯಾಗಿದೆ.ಇದು 10 ಲಕ್ಷದಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಮಹಿಳೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಉಲ್ಭಣಗೊಂಡರೆ ಪ್ರಾಣಕ್ಕೆ ಹಾನಿ ಉಂಟಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಅದಾದ ನಂತರ ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಮುಖ್ಯಮಂತ್ರಿ ನೇತೃತ್ವದ ಸಭೆಗೆ ಹಾಜರಾದ ಸಚಿವ ಡಿ.ಕೆ.ಶಿವಕುಮಾರ್ ಅವರು ರಮ್ಯಾ ಅವರು ಅಂಬರೀಷ್‌ ಅಂತ್ಯಸಂಸ್ಕಾರಕ್ಕೆ ಬಾರದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

‘ನಾನು ರಮ್ಯಾಗೆ ಫೋನ್ ಮಾಡಿದ್ದೆ.ಅಂಕಲ್ ಕಾಲು ನೋವಿದೆ ಬರುವುದಕ್ಕೆ ಕಷ್ಟ ಅಂದರು.ಕಾಲು ಜಾರಿ ಬಿದ್ದು ರಮ್ಯ ಕಾಲಿಗೆ ಗಾಯ ಮಾಡಿಕೊಂಡಿದ್ದಾರಂತೆ.ನಾನು ಫೋನ್ ಮಾಡಿದಾಗ ತಮ್ಮ ಕಾಲಿನ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.