
ಕೆ.ಆರ್.ಪುರ: 41 ವರ್ಷದ ಪತಿಯ ಜೀವ ಉಳಿಸಲು ಪತ್ನಿಯೇ ಮೂತ್ರಪಿಂಡ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬರು ಮೂತ್ರಪಿಂಡ ವೈಫಲ್ಯದಿಂದ ವೈಟ್‌ಫಿಲ್ಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಸಮಸ್ಯೆಯನ್ನು ಮನಗಂಡ ವೈದ್ಯರ ತಂಡ, ಪತ್ನಿಯ ಮೂತ್ರಪಿಂಡವನ್ನು ಯಶಸ್ವಿಯಾಗಿ ಕಸಿ ಮಾಡಿ ಜೀವ ಉಳಿಸಿದೆ.
‘ಸಾಮಾನ್ಯವಾಗಿ ಮಧುಮೇಹ ಅಥವಾ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡ ಹತ್ತರಿಂದ ಹದಿನೈದು ವರ್ಷ ಬಳಿಕ ಮೂತ್ರಪಿಂಡ ಹಾನಿಯಾಗುವ ಸಂಭವವಿರುತ್ತದೆ. ಈ ವ್ಯಕ್ತಿಗೆ ಮೂರು ವರ್ಷಗಳಲ್ಲಿ ಮೂತ್ರಪಿಂಡ ಸಮಸ್ಯೆ ಧೃಡಪಟ್ಟಿತ್ತು. ಪ್ರಾರಂಭಿಕ ಹಂತದಲ್ಲಿ ತಪಾಸಣೆ ಹಾಗೂ ಜೀವನ ಶೈಲಿ ಬದಲಾಯಿಸಿದರೆ ಕಿಡ್ನಿ ಹಾನಿ ತಡೆಯಬಹುದು’ ಎಂದು ವೈದ್ಯರಾದ ಹರೀಶ್ ಬಾಬು, ದಿಲೀಪ್ ಹಾಗೂ ಪ್ರಮೋದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.