ADVERTISEMENT

ನೆಲಮಂಗಲದಲ್ಲಿ ಪತ್ನಿ ಕೊಲೆ: ಪತಿ ಸೆರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 20:14 IST
Last Updated 6 ಜನವರಿ 2026, 20:14 IST
ಆನಂದ್
ಆನಂದ್   

ನೆಲಮಂಗಲ: ಕೇಬಲ್ ವೈರ್ ಬಳಸಿ ಪತ್ನಿಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಹುಣಸೆಘಟ್ಟೆಪಾಳ್ಯದಲ್ಲಿ ನಡೆದಿದೆ.

ಕನಕಪುರದ ಅರ್ಚನಾ(24) ಕೊಲೆಯಾದವರು. ಪತಿ-ಪತ್ನಿ ಜಗಳ ಮಾಡಿಕೊಂಡಿದ್ದರು. ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.

ಸ್ಥಳೀಯ ತೋಟದ ಕೆಲಸಕ್ಕೆ ದಂಪತಿ ಇತ್ತೀಚೆಗೆ ಬಂದಿದ್ದರು. ಆತ್ಮಹತ್ಯೆ ಎಂದು ಬಿಂಬಿಸಿ ತಲೆಮರಿಸಿಕೊಂಡಿದ್ದ ಪತಿ ಆನಂದನನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.