ADVERTISEMENT

ವನ್ಯಜೀವಿ ಮಂಡಳಿ ಪುನರ್‌ರಚನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 4:41 IST
Last Updated 17 ಅಕ್ಟೋಬರ್ 2020, 4:41 IST
ಹುಲಿ
ಹುಲಿ   

ಬೆಂಗಳೂರು: ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯನ್ನು ರಾಜ್ಯ ಸರ್ಕಾರ ಪುನರ್‌ರಚಿಸಿದೆ. ಮುಂದಿನ ಮೂರು ವರ್ಷ ಈ ಮಂಡಳಿ ಅಸ್ತಿತ್ವದಲ್ಲಿ ಇರಲಿದೆ.

ಮಂಡಳಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷರಾಗಿದ್ದು, ಅರಣ್ಯ ಸಚಿವ ಆನಂದ್‌ ಸಿಂಗ್‌ ಉಪಾಧ್ಯಕ್ಷರಾಗಿದ್ದಾರೆ.

ವಿಧಾನಮಂಡಲದಿಂದ ಶಾಸಕರಾದ ಎಲ್.ಎ. ರವಿಸುಬ್ರಹ್ಮಣ್ಯ, ಪೂರ್ಣಿಮಾ ಶ್ರೀನಿವಾಸ್‌ ಹಾಗೂ ವಿಧಾನಪರಿಷತ್‌ ಸದಸ್ಯ ಶಾಂತರಾಮ ಸಿದ್ದಿ ಸದಸ್ಯರು. ಸರ್ಕಾರೇತರ ಸಂಸ್ಥೆಗಳಿಂದ ವೈಲ್ಡ್‌ ಲೈಫ್‌ ಅಸೋಸಿಯೇಷನ್‌ ಆಫ್‌ ಸೌತ್ ಇಂಡಿಯಾದ ಅಧ್ಯಕ್ಷ ಸುಶೀಲ್‌ ಜಿ., ಬನ್ನೇರುಘಟ್ಟ ವೈಲ್ಡ್‌ ಲೈಫ್‌ ಅಸೋಸಿಯೇಷನ್‌ನ ಟ್ರಸ್ಟಿ ಸಿದ್ದಾರ್ಥ ಗೋಯೆಂಕ ಸದಸ್ಯರಾಗಿದ್ದಾರೆ.

ADVERTISEMENT

ಅಲ್ಲದೆ, ವನ್ಯಜೀವಿ ಕ್ಷೇತ್ರದ ವಿಷಯ ತಜ್ಞರು, ಜೀವಶಾಸ್ತ್ರಜ್ಞರು, ಪರಿಸರವಾದಿಗಳಾಗಿ ಗುರುತಿಸಿಕೊಂಡಿರುವ ಚೇತನ್‌ ಬಿ., ಸೋಮಶೇಖರ್‌, ಶಿವಪ್ರಕಾಶ್‌, ಅಲೋಕ್‌ ವಿಶ್ವನಾಥ್, ನವೀನ್‌ ಜಿ.ಎಸ್‌, ವಿನೋದ್‌ ಕುಮಾರ್ ಬಿ. ನಾಯ್ಕ್‌, ದಿನೇಶ್ ಸಿಂಘ್ವಿ, ಕೆ.ಎಸ್‌.ಎನ್‌. ಚಿಕ್ಕೆರೂರು, ತ್ಯಾಗ್‌ ಉತ್ತಪ್ಪ, ಜೋಸೆಫ್‌ ಹೂವರ್‌ ಕೂಡಾ ಮಂಡಳಿಯ ಸದಸ್ಯರಾಗಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸದಸ್ಯ ಕಾರ್ಯದರ್ಶಿಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಇತರ 12 ಮಂದಿ ಅಧಿಕಾರಿ ಸದಸ್ಯರಾಗಿ ಇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.