ADVERTISEMENT

ವಿಂಜೋ ಸಂಸ್ಥೆ ಹಣ ವಹಿವಾಟಿಗೆ ತಡೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 20:23 IST
Last Updated 1 ಜನವರಿ 2026, 20:23 IST
<div class="paragraphs"><p>ಹಣ </p></div>

ಹಣ

   

ಹಣ

ಬೆಂಗಳೂರು: ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ವಿಂಜೋ ಆನ್‌ಲೈನ್ ಗೇಮಿಂಗ್ ಸಂಸ್ಥೆಯ ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ವಿವಿಧ ಬ್ಯಾಂಕ್‌ಗಳ ಖಾತೆಗಳಲ್ಲಿ ₹192 ಕೋಟಿ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಹಣದ ವಹಿವಾಟು ಅನ್ನು ಸ್ಥಗಿತಗೊಳಿಸಿ, ಮುಂದಿನ ತನಿಖೆ ಆರಂಭಿಸಿದ್ದಾರೆ.

ADVERTISEMENT

ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ವಿಂಜೋ ಕಂಪನಿಗೆ ಸಂಬಂಧಿಸಿದ ಲೆಕ್ಕಪತ್ರ ವಿಭಾಗದ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವುದು, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವುದು ಪತ್ತೆಯಾಗಿತ್ತು. ಆ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಇ.ಡಿ. ತಿಳಿಸಿದೆ.

ನವೆಂಬರ್ 18ರಂದು ವಿಂಜೋ ಕಚೇರಿ ಹಾಗೂ ನಿರ್ದೇಶಕರ ನಿವಾಸಗಳ ಮೇಲೆ ಇ.ಡಿ. ಶೋಧ ನಡೆಸಿದ ವೇಳೆ ನಿಯಮಬಾಹಿರ ಚಟುವಟಿಕೆ ಹಾಗೂ ಹಣಕಾಸಿನ ವ್ಯವಹಾರದಲ್ಲಿ ತೊಡಗಿರುವ ಬಗ್ಗೆ ಮಹತ್ವದ ದಾಖಲೆಗಳು ದೊರೆತ್ತಿದ್ದವು. ಆನ್‌ಲೈನ್ ಗೇಮ್, ವಿಂಜೋ ಆ್ಯಪ್‌ನಲ್ಲಿ ರಿಯಲ್ ಮನಿ ಗೇಮ್ಸ್ ಆಟವಾಡುತ್ತಿದ್ದ ಗ್ರಾಹಕರು, ಕಂಪನಿ ಕಡೆಯಿಂದ ವ್ಯಕ್ತಿಗಳು ಆಟವಾಡುತ್ತಿದ್ದಾರೆ ಎಂದು ಸುಳ್ಳು ಹೇಳಿತ್ತು. ವಾಸ್ತವವಾಗಿ ಎ.ಐ, ಅಲ್ಗಾರಿದಮ್ ಮತ್ತು ಸಾಫ್ಟ್‌ವೇರ್‌ಗಳ ಮೂಲಕ ಆಟವಾಡಿಸಲಾಗುತ್ತಿತ್ತು ಎಂಬುದನ್ನು ಇ.ಡಿ ಅಧಿಕಾರಿಗಳು ಬಹಿರಂಗ ಪಡಿಸಿದ್ದರು. ಇದು ಅಕ್ರಮ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ವಿಂಜೋ ಕಂಪನಿ ಮೇಲೆ ನಡೆದ ದಾಳಿ ವೇಳೆ 2024ರ ಮೇನಿಂದ 2025ರ ಆಗಸ್ಟ್‌ವರೆಗೆ ಸುಮಾರು ₹177 ಕೋಟಿ, 2022ರ ಏಪ್ರಿಲ್‌ನಿಂದ  2023ರ ಡಿಸೆಂಬರ್‌ವರೆಗೆ ₹557 ಕೋಟಿ, ಅಲ್ಲದೆ, ಕೇಂದ್ರ ಸರ್ಕಾರ ರಿಯಲ್ ಮನಿ ಗೇಮ್ಸ್ ಮೇಲೆ ನಿಷೇಧ ವಿಧಿಸಿದ ಬಳಿಕವೂ, ವಿಂಜೋ ಕಂಪನಿ ಬಳಕೆದಾರ ಗ್ರಾಹಕರ ₹43 ಕೋಟಿ ಮೊತ್ತದ ಹಣವನ್ನು ವಾಪಸ್ ನೀಡದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ವಿಂಜೋ ಸುಮಾರು ₹802 ಕೋಟಿ ಮೌಲ್ಯದ ಆದಾಯ ಹೊಂದಿದ್ದು, ವಿದೇಶಗಳಿಗೆ ಹಣ ವರ್ಗಾವಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.