ADVERTISEMENT

‘ನಮ್ಮ ಮೆಟ್ರೊ’ ರೈಲಿನ ಒಳಗೆ ಊಟ ಮಾಡಿದ ಮಹಿಳೆಗೆ ₹500 ದಂಡ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 23:29 IST
Last Updated 28 ಏಪ್ರಿಲ್ 2025, 23:29 IST
<div class="paragraphs"><p>&nbsp;ನಮ್ಮ ಮೆಟ್ರೊ</p></div>

 ನಮ್ಮ ಮೆಟ್ರೊ

   

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲಿನ ಒಳಗೆ ಊಟ ಮಾಡಿದ ಮಹಿಳೆಗೆ ಬಿಎಂಆರ್‌ಸಿಎಲ್‌ ₹ 500 ದಂಡ ವಿಧಿಸಿದೆ.

ಮೆಟ್ರೊ ನಿಯಮ ಪ್ರಕಾರ ರೈಲಿನ ಒಳಗೆ ಆಹಾರ ಸೇವಿಸುವಂತಿಲ್ಲ. ಆದರೆ, ಏಪ್ರಿಲ್‌ 26ರಂದು ಮೆಟ್ರೊ ಹಸಿರು ಮಾರ್ಗದಲ್ಲಿ ಮಾದಾವರ ನಿಲ್ದಾಣದಿಂದ ಮಾಗಡಿ ರಸ್ತೆ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆ ಸಂಚಾರದ ವೇಳೆಯೇ ಊಟ ಮಾಡಿದ್ದರು. ಸಹಪ್ರಯಾಣಿಕರೊಬ್ಬರು ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 

ADVERTISEMENT

ಅದೇ ಮಹಿಳೆ ಸೋಮವಾರ ಬೆಳಿಗ್ಗೆ ಮಾದಾವರ ಮೆಟ್ರೊ ನಿಲ್ದಾಣಕ್ಕೆ ಬಂದಾಗ ಭದ್ರತಾ ಸಿಬ್ಬಂದಿ ದಂಡ ಹಾಕಿದ್ದಾರೆ. 

ಮೆಟ್ರೊ ನಿಲ್ದಾಣದ ಆವರಣದಲ್ಲಿ ಮತ್ತು ರೈಲಿನ ಒಳಗೆ ಆಹಾರ ಮತ್ತು ಪಾನೀಯ ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕಸ ಹಾಕುವುದನ್ನು ತಡೆಗಟ್ಟಲು, ಶುಚಿತ್ವ ಕಾಪಾಡಿಕೊಳ್ಳಲು ಈ ನಿಯಮ ರೂಪಿಸಲಾಗಿದೆ. ಎಲ್ಲ ಪ್ರಯಾಣಿಕರು ನಿಯಮ ಪಾಲನೆ ಮಾಡಬೇಕು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.