ADVERTISEMENT

Bengaluru Metro | ಹಳಿಗೆ ಇಳಿದಿದ್ದ ಮಹಿಳೆ: 15 ನಿಮಿಷ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 2:19 IST
Last Updated 2 ಜನವರಿ 2024, 2:19 IST
<div class="paragraphs"><p>ನಮ್ಮ ಮೆಟ್ರೊ&nbsp;</p></div>

ನಮ್ಮ ಮೆಟ್ರೊ 

   

ಸಾಂದರ್ಭಿಕ ಚಿತ್ರ

ಬೆಂಗಳೂರು: ಮೆಟ್ರೊ ರೈಲು ನೇರಳೆ ಮಾರ್ಗದ ಇಂದಿರಾನಗರ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಳಿಗೆ ಇಳಿದ ಘಟನೆ ಹೊಸ ವರ್ಷದ ಮೊದಲ ದಿನ ಸಂಜೆ 6.20 ಸುಮಾರಿಗೆ ನಡೆದಿದೆ. ಕೈಯಿಂದ ಜಾರಿ ಕೆಳಗೆ ಬಿದ್ದ ಮೊಬೈಲ್ ಎತ್ತಿಕೊಳ್ಳಲು ಮಹಿಳೆ ಹಳಿಗೆ ಇಳಿದಿದ್ದಾರೆ. ಇದನ್ನು ಕಂಡ ಸಿಬ್ಬಂದಿ, ವಿದ್ಯುತ್ ಸಂಪರ್ಕವನ್ನು ಕೂಡಲೇ ಕಡಿತಗೊಳಿಸಿದ್ದರಿಂದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಇದರಿಂದ 15 ನಿಮಿಷಗಳ ಕಾಲ ಮೆಟ್ರೊ ರೈಲು ಸಂಚಾರ ವ್ಯತ್ಯಯಗೊಂಡಿತ್ತು.

ADVERTISEMENT

ಮಹಿಳೆಯೊಬ್ಬರು ಫೋನ್‌ನಲ್ಲಿ ಮಾತನಾಡುತ್ತಾ ಪ್ಲಾಟ್‌ಫಾರಂನಲ್ಲಿ ತೆರಳುತ್ತಿದ್ದಾಗ ಮೊಬೈಲ್ ಜಾರಿ ಹಳಿ ಮೇಲೆ ಬಿದ್ದಿದೆ. ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಬಗ್ಗ ಅರಿವಿಲ್ಲದ ಮಹಿಳೆ ಸೀದಾ ಹಳಿಗೆ ಇಳಿದಿದ್ದಾರೆ. ವಿದ್ಯುತ್ ಆಫ್‌ ಮಾಡಿದ ಬಳಿಕ, ಸಿಬ್ಬಂದಿ ಸಹ ಪ್ರಯಾಣಿಕರು ಮಹಿಳೆಯನ್ನು ಮೇಲಕ್ಕೆತ್ತಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೊ ನಿಲ್ದಾಣದ ಸಿಬ್ಬಂದಿಯ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇದೇ ವರ್ಷದ ಫೆಬ್ರುವರಿಯಲ್ಲಿ ಮೆಟ್ರೊ ರೈಲು ಹಳಿಗಳನ್ನು ದಾಟಲು ಯತ್ನಿಸಿದ ಇಬ್ಬರನ್ನು ಸಾರ್ವಜನಿಕರು ಮತ್ತು ಭದ್ರತಾ ಸಿಬ್ಬಂದಿ ರಕ್ಷಿಸಿದ್ದರು.

ನಾಗಸಂದ್ರ ಕಡೆಗೆ ಹೋಗಬೇಕಿದ್ದ ಪ್ರಯಾಣಿಕರಿಬ್ಬರು ಕುವೆಂಪು ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಮೆಜೆಸ್ಟಿಕ್ ಕಡೆಗೆ ಹೋಗುವ ಪ್ಲಾಟ್‌ಫಾರಂಗೆ ಹೋಗಿದ್ದರು. ಎದುರಿನ ಪ್ಲಾಟ್‌ಫಾರಂಗೆ ಹೋಗಬೇಕಿತ್ತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದರು. ತರಕಾರಿ ಬ್ಯಾಗ್ ಹಿಡಿದಿದ್ದ ಇಬ್ಬರು ಅತ್ತ ಸಾಗಲು ಹಳಿಗಳ ಮೇಲೆ ಇಳಿದರು. ಸ್ಥಳದಲ್ಲಿ ಇದ್ದ ಸಹ ಪ್ರಯಾಣಿಕರು ಮತ್ತು ಭದ್ರತಾ ಸಿಬ್ಬಂದಿ ಕೂಗಿ ಅವರನ್ನು ಮುಂದೆ ಹೋಗದಂತೆ ಎಚ್ಚರಿಸಿ ವಾಪಸ್ ಕರೆದರು. ಬಳಿಕ ಅವರನ್ನು ಮೇಲಕ್ಕೆ ಹತ್ತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.