ADVERTISEMENT

ಮಹಿಳಾ ಪೊಲೀಸ್ ಗಸ್ತು ಪಡೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 2:33 IST
Last Updated 27 ಫೆಬ್ರುವರಿ 2020, 2:33 IST
ಬೈಕ್‌ನಲ್ಲಿ ಗಸ್ತು ತಿರುಗಲು ಸಜ್ಜಾದ ಮೊದಲ ಮಹಿಳಾ ಪಡೆ – ಪ್ರಜಾವಾಣಿ ಚಿತ್ರ
ಬೈಕ್‌ನಲ್ಲಿ ಗಸ್ತು ತಿರುಗಲು ಸಜ್ಜಾದ ಮೊದಲ ಮಹಿಳಾ ಪಡೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಮೊದಲ ಮಹಿಳಾ ಪೊಲೀಸ್ ಗಸ್ತು ಪಡೆಗೆ ಬುಧವಾರ ಚಾಲನೆ ನೀಡಲಾಯಿತು. ಆಗ್ನೇಯ ವಿಭಾಗದಲ್ಲಿ ಈ ಗಸ್ತು ಪಡೆಯನ್ನು ರಚಿಸಲಾಗಿದ್ದು, ಪ್ರತಿಯೊಂದು ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಡೆಯಲ್ಲಿದ್ದಾರೆ. ಹೊಯ್ಸಳ ವಾಹನ ಹಾಗೂ ಬೈಕ್‌ನಲ್ಲಿ ಗಸ್ತು ತಿರುಗಲಿದ್ದಾರೆ.

ಕೋರಮಂಗಲದ ಬಿಬಿಎಂಪಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಪ್ರೇಮಾ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿದ್ದ ನಟಿ ರಾಗಿಣಿ, ‘ಪೊಲೀಸ್ ಇಲಾಖೆಯಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೀಗ ಇವರೆಲ್ಲ ಗಸ್ತು ತಿರುಗಲಿದ್ದಾರೆ. ಇದರಿಂದ ಮಹಿಳೆಯರು ಧೈರ್ಯವಾಗಿ ಓಡಾಡಬಹುದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.